ಕಾರ್ಕಳ: ಕಣಂಜಾರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಆದಿ ದ್ರಾವಿಡ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.ಹೆಚ್ಚಿನ ಜನರು ಜೀವನ ನಿರ್ವಹಣೆಗಾಗಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.ಈ ಭಾಗದಲ್ಲಿ ಇರುವ ಹಲವಾರು ಮನೆಗಳ ಪರಿಸ್ಥಿತಿ ಶೋಚನೀಯವಾಗಿದೆ.ಕುಟ್ಟಿ ಎಂಬ ಹೆಸರಿನ ವ್ಯಕ್ತಿಗೆ ಸರಿಯಾದ ಮನೆ ಇಲ್ಲದೆ ಟರ್ಪಾಲು ಹಾಕಿದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕಡೆ ಗಮನಹರಿಸಿ ಎಂದು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಮಾಜಿ ಜಿಲ್ಲಾ ಅಧ್ಯಕ್ಷ ಹಾಗೂ ಕರ್ನಾಟಕ ಭೀಮ್ ಸೇನೆ (ರಿ.) ಉಡುಪಿ ಜಿಲ್ಲಾ ಅಧ್ಯಕ್ಷರಾದ ಸುಧಾಕರ್ ದಾನಶಾಲೆ ಹೇಳಿದ್ದಾರೆ. ಸ್ವಾತಂತ್ರ್ಯಬಂದು ಅದೆಷ್ಟೋ ವರ್ಷಗಳಾದರೂ ಕೂಡಾ ಕೆಲವೊಂದು ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯದ ಪರಿಸ್ಥಿತಿ
ಈಗಲೂ ಹಾಗೆಯೇ ಇದೆ.
Home Uncategorized ಶೋಚನೀಯ ಸ್ಥಿತಿಯಲ್ಲಿ ಇರುವ ಆದಿ ದ್ರಾವಿಡ ಸಮುದಾಯದ ಮನೆಗೆ ಅನುದಾನ ಬಿಡುಗಡೆಗೊಳಿಸಿ: ಸುಧಾಕರ್ ದಾನಶಾಲೆ

