ಶ್ರೀ ಭ್ರಾಮರಿ ಕ್ರಿಯೇಷನ್ ಬೈಲುಬೀಡು ಬಜಪೆ ಇವರು ಅರ್ಪಿಸುವ,ಕಚ್ಚೂರು ಶ್ರೀ ಮಾಲ್ದಿ ದೇವಿ ಅಮ್ಮನವರ ತುಳು ಭಕ್ತಿಗೀತೆ “ಅಪ್ಪೆ ಮಾಲ್ದಿಗ್ ಸೊಲ್ಮೆಲು ಸಾರ” ಇದರ ಬಿಡುಗಡೆ ಸಮಾರಂಭವು ತಾ-23-8-2026 ನೇ ಆದಿತ್ಯವಾರ ಬೆಳಿಗ್ಗೆ 10-30 ಕ್ಕೆ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಕದ್ರಿ ಇಲ್ಲಿ ನೆರವೇರಲಿದೆ. ಕ್ಷೇತ್ರದ ಪ್ರದಾನ ಅರ್ಚಕರಾದ ಶ್ರೀ ಕೃಷ್ಣ ಅಡಿಗರವರು ಈ ಭಕ್ತಿಗೀತೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಶುಭ ಮತ್ತು ಶ್ರೀ ದಿನೇಶ್ ನಿರ್ಮಾಣದ ಈ ಭಕ್ತಿಗೀತೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ನವೀನ್ ಸುವರ್ಣ ಪಡ್ರೆ ಇವರು ಸಾಹಿತ್ಯವನ್ನು ಬರೆದಿದ್ದು, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕರಾದ ರವೀಂದ್ರ ಪ್ರಭುರವರು ಈ ಭಕ್ತಿಗೀತೆಯನ್ನು ಹಾಡಿದ್ದಾರೆ.ಅಕ್ಷತಾ ಕೈಕಂಬ ಇವರು ಸಹಗಾಯನವನ್ನು ಮಾಡಿದ್ದಾರೆ. ಗುರು ಬಾಯಾರ್ ಇವರ ಸಂಗೀತದ ಈ ಸುಮಧುರ ಭಕ್ತಿಗೀತೆಗೆ ಸ್ಪೂರ್ತಿ ಅಡ್ಯಾರ್ ಪದವು ಇವರು ನೃತ್ಯ ಮಾಡಿದ್ದಾರೆ. ದಿನೇಶ್ ಬೈಲುಬೀಡು ಇವರ ನಿರ್ದೇಶನದಲ್ಲಿ ನಿರ್ಮಾಣಗೊಂಡ ಈ ಭಕ್ತಿಗೀತೆಯು ಶ್ರೀ ಭ್ರಾಮರಿ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದ್ದು, ಇದು ಶ್ರೀ ಭ್ರಾಮರಿ ಕ್ರಿಯೇಷನ್ ನ ಯಶಸ್ವಿ ನಾಲ್ಕನೆಯ ಭಕ್ತಿಗೀತೆಯಾಗಿದೆ.

