
ಮಾಣಿಲ ಶ್ರೀ ಧಾಮದಲ್ಲಿ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಭಾನುವಾರ ಗಣಹೋಮ, ಚಂಡಿಕಾಯಾಗ,ದುರ್ಗಾಪೂಜೆ,ಸಾಮೂಹಿಕ ಕುಂಕುಮಾರ್ಚನೆ ಮತ್ತು ಕೊಪ್ಪರಿಗೆ ಮುಹೂರ್ತ ಧಾರ್ಮಿಕ ವಿಧಿವಿಧಾನದೊಂದಿಗೆ ನಡೆಯಿತು.
ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಶರನ್ನವರಾತ್ರಿ ಉತ್ಸವ ಯಶಸ್ವಿಯಾಗಿ ನಡೆಯಲು ಪ್ರಾರ್ಥಿಸಲಾಯಿತು., ಕ್ಷೇತ್ರದ ಟ್ರಸ್ಟಿಗಳಾದ ತಾರಾನಾಥ ಕೊಟ್ಟಾರಿ,ಚಂದ್ರಶೇಖರ ಮೂಲ್ಯ,ಮಹೇಶ್ ಮೂಲ್ಯ(ಬೆಂಗಳೂರು )ರೇವತಿ ಪೆರ್ನೆ,ವನಿತಾ ವಿ ಶೆಟ್ಟಿ,ರಮೇಶ್ ಮೂಲ್ಯ,(ಪಣೋಲಿಬೈಲು ), ಮಹಾಲಕ್ಷ್ಮೀ ಮಹಿಳಾ ಸಮಿತಿಯ ಸದಸ್ಯರು,ಹಾಗೂ ಶ್ರೀಧಾಮ ಮಿತ್ರವೃಂದದ ಸದಸ್ಯರು ಉಪಸ್ಥಿತರಿದ್ದರು.
