ಮೂಡಬಿದಿರೆಯಲ್ಲಿ ಸುರೇಶ್ ಕೆ. ಪೂಜಾರಿ ನೋಟರಿ ವಕೀಲರ ಕಚೇರಿ ಸ್ಥಳಾಂತರ

0
15


ಮೂಡಬಿದಿರೆ: ಹೆಸರಾಂತ ನೋಟರಿ ಹಾಗೂ ವಕೀಲರಾದ ಸುರೇಶ್ ಕೆ. ಪೂಜಾರಿ ಅವರ ನೂತನ ಕಚೇರಿ” ಫಾರ್ಚೂನ್ ನೀತಿ ಹೈಟ್ಸ್,” ಮೂಡುಬಿದಿರೆ ಪುರಸಭೆ ಎದುರು ಸ್ಥಳಾಂತರಗೊಂಡಿದ್ದು, ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮವು ಆತ್ಮೀಯ ಹಾಗೂ ಸಂಭ್ರಮದ ವಾತಾವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸುರೇಶ್ ಕೆ. ಪೂಜಾರಿ ಅವರ ಮಾತೃಶ್ರೀ ಶ್ರೀಮತಿ ಸುಂದರಿ ಕೆ. ಪೂಜಾರಿ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ನೂತನ ಕಚೇರಿಯಲ್ಲಿ ಕಾನೂನು ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹಾಗೂ ಜನಸ್ನೇಹಿಯಾಗಿ ಒದಗಿಸುವ ಉದ್ದೇಶದಿಂದ ಕಚೇರಿ ಸ್ಥಳಾಂತರಿಸಲಾಗಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ರಂಜಿತ್ ಪೂಜಾರಿ ಅವರು ಶುಭ ಹಾರೈಸಿ ಮಾತನಾಡಿ, ಸುರೇಶ್ ಕೆ. ಪೂಜಾರಿ ಅವರು ಕಾನೂನು ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಇನ್ನಷ್ಟು ಯಶಸ್ವಿಯಾಗಿ ಮುಂದುವರಿಯಲಿ ಹಾಗೂ ನೂತನ ಕಚೇರಿ ಉತ್ತಮವಾಗಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಬಿ. ಶೀನ ಪೂಜಾರಿ, ರಾಜಶೇಖರ ಮಧ್ಯಸ್ಥ, ಸುಧಾಕರ ಕೆ. ಪೂಜಾರಿ, ವಾಸು ಪೂಜಾರಿ, ಉದ್ಯಮಿಗಳಾದ ಪ್ರೀತಿ ಕ್ಯಾಟರರ್ಸ್‌ನ ರವೀಂದ್ರ ಕರ್ಕೇರ, ರೋಹನ್ ಅತಿಕಾರಬೆಟ್ಟು, ಗಿರೀಶ್ ಕುಮಾರ್ ಹಂಡೇಲು, ನವೀನ್ ಪಿ. ಕುಂದರ್, ರಾಜೇಂದ್ರ ಬಂಗೇರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಸುರೇಶ್ ಕೆ. ಪೂಜಾರಿ ಅವರಿಗೆ ಶುಭಾಶಯಗಳನ್ನು ಸಲ್ಲಿಸಿದರು.
ಸಹೋದರ ಸಂಬಂಧಿಗಳಾದ ರಮೇಶ್ ಕೆ. ಪೂಜಾರಿ, ಶ್ರೀಮತಿ ಸಂಗೀತ ರಮೇಶ್, ಕಿರಣ್, ಆಶಿಶ್, ಪತ್ನಿ ಶ್ರೀಮತಿ ಜಯಶ್ರೀ ಸುರೇಶ್, ಪುತ್ರ ಸುಜ್ಞಾನ್, ನ್ಯಾಯವಾದಿ ಸುರೇಶ್ ಜಿ.ಕೆ., ಸುಪ್ರಿಯಾ ಸೇರಿದಂತೆ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ತುಷಾರ್ ಪ್ರಾರ್ಥನೆ ನೆರವೇರಿಸಿದರು. ಸುರೇಶ್ ಕೆ. ಪೂಜಾರಿ ಅವರು ಸ್ವಾಗತಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ರೋಹನ್ ಅತಿಕಾರಬೆಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು. .
.