ಹೆಬ್ರಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಹೋಟೆಲ್ ಕಾರ್ಮಿಕನಾಗಿ ಹಾಗೂ ಪ್ರಜಾವಣಿ ಪತ್ರಿಕೆಯ ಏಜೆಂಟ್ ಆಗಿ ಮನೆಮನೆಗೆ ಸಮಯಕ್ಕೆ ಸರಿಯಾಗಿ ಪತ್ರಿಕೆ ತಲುಪಿಸುತ್ತ ಪ್ರಾಮಾಣಿಕವಾಗಿ ದುಡಿಯುತ್ತಿದ್ದ ವಿಠ್ಠಲ ಪೂಜಾರಿ (ವಿಠ್ಠಲ ಪೂಜಾರಿ) ಅವರ ಕುಟುಂಬ ಇಂದು ಗಂಭೀರ ಸಂಕಷ್ಟದಲ್ಲಿದೆ.
ವಿಠ್ಠಲ ಪೂಜಾರಿ ಅವರ ತಾಯಿ, 65 ವರ್ಷದ ವನಜ ಪೂಜಾರಿ ಅವರು ಶ್ವಾಸಕೋಶ ಸಂಬಂಧಿತ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದು, ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಚಿಕಿತ್ಸೆಗಾಗಿ ಸುಮಾರು 4 ಲಕ್ಷ ರೂಪಾಯಿ ವೆಚ್ಚವಾಗಿದೆ. ವೈದ್ಯರ ಸಲಹೆ ಪ್ರಕಾರ ಇನ್ನೂ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಅಗತ್ಯವಿದ್ದು, ಮುಂದಿನ ಹಂತದ ಚಿಕಿತ್ಸೆಗೆ ಅಂದಾಜು ಇನ್ನೂ 4 ಲಕ್ಷ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದೆ.

ಅತ್ಯಂತ ಬಡ ಹಿನ್ನೆಲೆಯ ಈ ಕುಟುಂಬಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಭರಿಸುವುದು ಅಸಾಧ್ಯವಾಗಿದೆ. ದಿನಗೂಲಿ ಹಾಗೂ ಪತ್ರಿಕೆ ವಿತರಣೆಯ ಆದಾಯವೇ ಕುಟುಂಬದ ಏಕೈಕ ಜೀವನಾಧಾರವಾಗಿದ್ದು, ಈಗ ಚಿಕಿತ್ಸಾ ವೆಚ್ಚದಿಂದ ಸಂಪೂರ್ಣ ಕುಸಿದ ಸ್ಥಿತಿಯಲ್ಲಿದ್ದಾರೆ.
ಮಾನವೀಯ ಮನಸ್ಸುಳ್ಳ ದಾನಿಗಳು, ಸಂಘ–ಸಂಸ್ಥೆಗಳು ಹಾಗೂ ಸಾರ್ವಜನಿಕರು ಮುಂದಾಗಿ ನೆರವು ನೀಡಿದರೆ, ಒಂದು ಸಣ್ಣ ಸಹಾಯವೂ ಈ ಬಡ ಕುಟುಂಬದ ಬದುಕಿಗೆ ಬೆಳಕು ತರುವುದರಲ್ಲಿ ಸಂಶಯವಿಲ್ಲ.
ಸಹಾಯ ಮಾಡಲು ಬ್ಯಾಂಕ್ ವಿವರಗಳು :
Bank: Bank of Baroda
Branch: Donderangadi
Account No: 81760100008264
MICR Code: 576012009
ಸಂಪರ್ಕ:ವಿಠ್ಠಲ ಪೂಜಾರಿ, ಮೊಬೈಲ್: 8722052461.

