
ಉಡುಪಿ : ಎಂ.ಜಿ.ಎಂ. ಕಾಲೇಜಿನ ಎದುರು ನಂದಿನಿ ಹಾಲಿನ ಬೂತ್ ಬಳಿ ವ್ಯಕ್ತಿಯೊಬ್ಬರು, ಅಸ್ವಸ್ಥರಾಗಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರಾದ ಮಮತಾ ಕಡಿಯಾಳಿ ಅವರು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು.
ತಕ್ಷಣ ಸ್ಥಳಕ್ಕೆ ತೆರಳಿದ ನಿತ್ಯಾನಂದ ಒಳಕಾಡು ಅವರು ಅಸ್ವಸ್ಥ ವ್ಯಕ್ತಿಯನ್ನು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ವ್ಯಕ್ತಿಗೆ ಹಲವು ಆರೋಗ್ಯ ಹಾಗೂ ವೈಯಕ್ತಿಕ ಸಮಸ್ಯೆಗಳಿರುವುದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಈ ವ್ಯಕ್ತಿ ಕಳೆದ ಒಂದು ವರ್ಷದಿಂದ ವಾಮಂಜೂರಿನಲ್ಲಿ ವಾಸವಾಗಿದ್ದರು, ಹೆಸರು ಉಪೇಂದ್ರ ನಾಯಕ್ ಎಂದು ತಿಳಿದುಬಂದಿದೆ. ಅವರ ಸಂಬಂಧಿಕರು ಅಥವಾ ಪರಿಚಯಸ್ಥರು ಇದ್ದಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

