ಐವನ್ ಡಿ’ಸೋಜಾ ಶಿಫಾರಸ್ಸಿಗೆ ಸ್ಪಂದನೆ: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 12 ಮಂದಿಗೆ ₹9.83 ಲಕ್ಷ ನೆರವು

0
17

ಮಂಗಳೂರು : ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 12 ಮಂದಿ ಅರ್ಜಿದಾರರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಟ್ಟು ₹9,83,375/- (ರೂ. ಒಂಬತ್ತು ಲಕ್ಷದ ಎಂಬತ್ತ ಮೂರು ಸಾವಿರದ ಮುನ್ನೂರ ಎಪ್ಪತ್ತೈದು) ಪರಿಹಾರ ಧನ ಮಂಜೂರಾಗಿದ್ದು, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ಶಿಫಾರಸ್ಸಿನ ಮೇರೆಗೆ ಈ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆಯಾದ ಈ ನೆರವಿನಡಿ ಉಡುಪಿ ಜಿಲ್ಲೆಯ ಮರಿಯಾ ತೆರೆಸ ಡಿಸೋಜಾ ಅವರಿಗೆ ವಿಶೇಷ ಪ್ರಕರಣದಡಿ ₹3 ಲಕ್ಷ, ಕನ್ನನಗೌಡ ಹೇಮನಗೌಡ (ಜಪ್ಪಿನಮೊಗರು) ಅವರಿಗೆ ವಿಶೇಷ ಪ್ರಕರಣದಡಿ ₹2 ಲಕ್ಷ ಹಾಗೂ ಕೃಷ್ಣ ಮುರ್ಡೇಶ್ವರ ನಾಯ್ಕ ಅವರಿಗೆ ವಿಶೇಷ ಪ್ರಕರಣದಡಿ ₹2 ಲಕ್ಷ ನೆರವು ಮಂಜೂರಾಗಿದೆ.

ಇದಲ್ಲದೆ, ನೆಬಿಸ (ಸುಳ್ಯ) ಅವರಿಗೆ ₹79,747, ಅಬ್ದುಲ್ ಖಾದರ್ (ಮಂಗಳೂರು) ಅವರಿಗೆ ₹59,066 ಪುಷ್ಪಲತಾ (ಕುದ್ರೋಳಿ) ಅವರಿಗೆ ₹31,893, ಅಬ್ದುಲ್ ಹಮೀದ್ (ಉಡುಪಿ) ಅವರಿಗೆ ₹25,000, ಪದ್ಮಾವತಿ (ಮೂಡಬಿದ್ರಿ) ಅವರಿಗೆ ₹24,217, ರೂಪಾ ರೈ (ಜಪ್ಪಿನಮೊಗರು) ಅವರಿಗೆ ₹23,500, ಹಮೀದ್ (ಮಂಗಳೂರು) ಅವರಿಗೆ ₹22,685, ಅಹಮ್ಮದ್ ಬಾವಾ (ಕಾಟಿಪಳ್ಳ) ಅವರಿಗೆ ₹8,737 ಹಾಗೂ ಮಹಮ್ಮದ್ ಅನ್ಸರ್ (ಮಂಗಳೂರು) ಅವರಿಗೆ ₹8,500 ಪರಿಹಾರ ಧನ ಮಂಜೂರಾಗಿದೆ.

ಫಲಾನುಭವಿಗಳಿಗೆ ಮಂಜೂರಾದ ಪರಿಹಾರ ಧನದ ಬಿಡುಗಡೆ ಪತ್ರಗಳನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.

ಈ ಮೂಲಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಚಿಕಿತ್ಸಾ ವೆಚ್ಚ ಭರಿಸಲು ಸರ್ಕಾರದ ನೆರವು ತಲುಪಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಯು ಅನೇಕ ಕುಟುಂಬಗಳಿಗೆ ಆಶಾಕಿರಣವಾಗಿ ಪರಿಣಮಿಸಿದೆ.

LEAVE A REPLY

Please enter your comment!
Please enter your name here