ವಿದ್ಯಾದಾಯಿನೀ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ

0
16

ಸುರತ್ಕಲ್‌ : ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆ, ಸುರತ್ಕಲ್ ಇಲ್ಲಿನ ಹಳೆ ವಿದ್ಯಾರ್ಥಿಗಳ ‘ಪುನರ್ಮಿಲನ’ ಕಾರ್ಯಕ್ರಮವು ಇತ್ತೀಚಿಗೆ ಜರುಗಿತು. ಹಿಂದೂ ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಾಗೂ ನೋಟರಿ ಹೆಚ್. ವಿ. ರಾಘವೇಂದ್ರ ಮುಖ್ಯ ಅತಿಥಿಯಾಗಿದ್ದರು. ಶಾಲೆಯ ಹಳೆ ವಿದ್ಯಾರ್ಥಿಗಳ ನೂತನ ಒಕ್ಕೂಟ ‘ವಿದ್ಯಾರ್ಥಿ ಫೋರಂ’ ನ್ನು ಈ ಸಂದರ್ಭದಲ್ಲಿ ರಚಿಸಲಾಯಿತು. ಇದರ ನೂತನ ಅಧ್ಯಕ್ಷರಾಗಿ ಡಾ. ಸಮರ್ಥ ಶೆಣೈ ಹಾಗೂ ಕಾರ್ಯದರ್ಶಿಯಾಗಿ ಡಾ. ಪುನೀತ್ ಬೇಕಲ್ ಆಯ್ಕೆಯಾದರು.

ಹಿಂದೂ ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಎಚ್ . ಶ್ರೀರಂಗ, ಶಾಲೆಯ ನಿವೃತ್ತ ಪ್ರಾಂಶುಪಾಲ ಶ್ರೀಕಾಂತ್ ಚಿಪಳೂಣ್ಕರ್, ಹಿರಿಯ ನಿವೃತ್ತ ಶಿಕ್ಷಕಿ ಆಶಾ ಬಿ. ಅಮಿನ್, ಶಾಲಾ ಸಂಚಾಲಕ ವಿಶ್ವರಾಜ್ ಇಡ್ಯಾ, ಶಾಲಾ ಪ್ರಾಂಶುಪಾಲರಾದ ಡಾ . ಶಶಿಕುಮಾರ್ ಕೆ. ಸಿ., ಹಿರಿಯ ಶಿಕ್ಷಕಿ ಪುಷ್ಪ ಸಾಲಿಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲೆಯ ಹಳೆಯ ನಿರ್ಗಮಿತ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಹಳೆ ವಿದ್ಯಾರ್ಥಿಗಳಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು .

ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೆಚ್ .ವಿ . ಸಂಘದ ಉಪಾಧ್ಯಕ್ಷರಾದ ರಮೇಶ್ ಟಿ. ಏನ್. , ಮಾಜಿ ಕಾರ್ಯದರ್ಶಿ ಎಂ. ವೆಂಕಟ್ರಾವ್, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ವಿನಯ ಆಚಾರ್ , ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ, ಶಿಕ್ಷಕ- ರಕ್ಷಕ ಸಂಘದ ಮಾಜಿ ಅಧ್ಯಕ್ಷ ಡಾ . ರಚನಾ ಕೊರ್ಕೋಡೆ, ಹಿರಿಯರಾದ ಎಚ್ . ಯು . ಅನಂತಯ್ಯ ಹಾಗೂ ಈ ಕಾರ್ಯಕ್ರಮಕ್ಕೆ ಆಗಮಿಸಿದ ಹಳೆ ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಜ್ಯೋತಿ ಸಿ, ಸವಿತಾ, ಉಪ ಪ್ರಾಂಶುಪಾಲೆ ಅಶ್ವಿನಿ ಐತಾಳ್ , ವಾಣಿ ಕೆ., ಮೀರಾ, ಸುಧಾ ಶೆಣೈ, ಸುಮಂಗಲಾ, ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು. ಧನಲಕ್ಷ್ಮಿ ವಂದಿಸಿದರು.