ಜಿಲ್ಲಾ ಅಲಯನ್ಸ್ ಕ್ಲಬ್ ವತಿಯಿಂದ ಪರಿಶೀಲನಾ ಸಭೆ

0
15

ಹೆಬ್ರಿ : ಅಸೋಸಿಯೇಷನ್ ಒಫ್ ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ವತಿಯಿಂದ ಪ್ರಾಂತೀಯ ಕ್ಲಬ್ ಗಳ ಪರಿಶೀಲನಾ ಸಭೆಯು ಉಡುಪಿಯ ಕಾರ್ತಿಕ್ ಎಸ್ಟೇಟ್ ಹಾಲ್ ನಲ್ಲಿ ಆ.10 ರಂದು ನಡೆಯಿತು.

ಅಲಯನ್ಸ್ ಕ್ಲಬ್ ಗಳ ಪದಾಧಿಕಾರಿಗಳು ಏಪ್ರಿಲ್ ನಿಂದ ಜುಲೈ ತನಕದ ಪ್ರಗತಿ ವರದಿಯನ್ನು ಮಂಡಿಸಿದರು. ಜಿಲ್ಲಾ ಅಲಯನ್ಸ್ ಕ್ಲಬ್ ಇದರ ಪ್ರಾಂತೀಯ ಅಧ್ಯಕ್ಷರಾದ ಅಲೈ ಡಾ. ಸಂತೋಷ ಕುಮಾರ್ ಬೈಲೂರ್ ಇವರು ಒಂದು ಮತ್ತು ಎರಡು ವಲಯದ ಕ್ಲಬ್ ಗಳ ಪದಾಧಿಕಾರಿಗಳು ಮಂಡಿಸಿದ ಸಮಾಜ ಸೇವಾ ಕಾರ್ಯ ಚಟುವಟಿಕೆಗಳ ವರದಿಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸದಸ್ಯತನ ಶುಲ್ಕದ ಸಂಗ್ರಹಣೆ, ಹೊಸ ಸದಸ್ಯರ ಸೇರ್ಪಡೆ, ಎಲ್ಲಾ ಕ್ಲಬ್ ಗಳು ಒಂದೊಂದು ಹೊಸ ಕ್ಲಬ್ ಗಳನ್ನು ಮಾಡುವತ್ತ ಗಮನ ಹರಿಸಬೇಕು. ಪ್ರತಿ ತಿಂಗಳ 5 ನೇ ತಾರೀಕಿನ ಒಳಗೆ ಪ್ರಗತಿಯ ವರದಿ ಒಪ್ಪಿಸುವುದರ ಬಗ್ಗೆ ಅವರು ಸಲಹೆ, ಸೂಚನೆ ನೀಡಿದರು.

ಅಲಯನ್ಸ್ ಕ್ಲಬ್ ಚಿಟ್ಪಾಡಿ, ಮಂಗಳೂರು , ಅಂಬಲ್ಪಾಡಿ, ಉಡುಪಿ ರಾಯಲ್, ಕಡೆಕಾರ್, ಕೋಟ ಬ್ರಹ್ಮಾವರ, ಹೆಬ್ರಿ, ಹೆಬ್ರಿ ಸಿಟಿ, ಮೊದಲಾದ ವಲಯ ಒಂದು ಮತ್ತು ಎರಡರ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಉಪಾಧ್ಯಕ್ಷರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಐಪಿಡಿಜಿ ಸುನಿಲ್ ಸಾಲಿಯಾನ್, ದ್ವಿತೀಯ ವಿಡಿಜಿ ಡಾ. ಅಶೋಕ್ ಕುಮಾರ್ ವೈ ಜಿ. ಯವರು ಮಾತನಾಡಿ ಸಲಹೆ ಸೂಚನೆ ನೀಡಿದರು. ಜಿಲ್ಲಾ ಚೀಫ್ ಕೋರ್ಡಿನೇಟರ್ ಸುದರ್ಶನ್ ಹೆಗ್ಡೆ ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ ರಾಮಚಂದ್ರ ಭಟ್ ರವರು ಅಲಯನ್ಸ್ ಕ್ಲಬ್ ಗಳ ಕಾರ್ಯ ನಿರ್ವಹಣೆ, ಹೊಸ ಕ್ಲಬ್ ಗಳ ಸ್ಥಾಪನೆ, ಆಜೀವ ಸದಸ್ಯರನ್ನಾಗಿ ಮಾಡುವುದರ ಬಗ್ಗೆ, ತಿಂಗಳ ರಿಪೋರ್ಟ್ ನೀಡುವ ಬಗ್ಗೆ ಮಾತನಾಡಿದರು. ವಲಯ ಒಂದರ ವಲಯ ಅಧ್ಯಕ್ಷರಾದ ಡಾ. ಗಾಯತ್ರಿ ಯವರು ಸ್ವಾಗತಿಸಿ, ವಂದಿಸಿದರು. ಜಿಲ್ಲಾ ಚೀಫ್ ಕೋಆಡಿನೇಟರ್ ಕೆ. ಜಯರಾಮ ಆಚಾರ್ಯ ನಿರೂಪಿಸಿದರು.