ರಿಕ್ಷಾ ಚಾಲಕರು ಸಮಾಜದ ರಾಯಭಾರಿಗಳು ಬಜ್ಪೆ ಕಿನ್ನಿಪದವು ರಿಕ್ಷಾ ಸ್ಟ್ಯಾಂಡ್ ಉದ್ಘಾಟನೆ ಐವನ್ ಡಿʼಸೋಜಾ

0
145

ರಿಕ್ಷಾ ಚಾಲಕರು ತಮ್ಮ ಸಮಾಜದಲ್ಲಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದಾಗ ಅವರ ಘನತೆ ಗೌರವ ಹೆಚ್ಚಾಗುತ್ತದೆ. ಸಮಾಜದಲ್ಲಿ ಜನರ ಬೇಡಿಕೆಗಳಿಗನುಗುಣವಾಗಿ ರಿಕ್ಷಾ ಚಾಲಕರು ಕಾರ್ಯನರ್ವಹಣೆ ಮಾಡಿದಾಗ ಆಗ ಅವರು ಸಮಾಜದ ರಾಯಭಾರಿಗಳಾಗಿ ಕೆಲಸ ಮಾಡಿದಂತಾಗುತ್ತದೆ ಎಂದು ಮಂಗಳೂರು ಮಹಾನಗರ ರಿಕ್ಷಾ ಚಾಲಕ ಸಂಘದ ಅಧ್ಯಕ್ಷರು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾರವರು ತಮ್ಮ ಶಾಸಕರ ಪ್ರದೇಶಾಭಿವೃದ್ದಿ ಅನುದಾನದಲ್ಲಿ ನಿರ್ಮಿತವಾದ ಸುಸಜ್ಜಿತವಾದ ಬಜ್ಪೆ ಕಿನ್ನಿಪದವು ರಿಕ್ಷಾ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಏಲ್ಲಾ ವ್ಯಕ್ತಿಗಳಿಗೂ ಗೌರವ ನೀಡಬೇಕಾಗುತ್ತದೆ. 10ನೇ ಕ್ಲಾಸ್ ಕಲಿತು ಯೂನಿಫಾರಂ ಹಾಕಿ ರಿಕ್ಷಾ ಚಾಲನೆ ಕಲಿತು, ಸಮಾಜದ ಬೇಡಿಕೆ ಅನುಗುಣವಾಗಿ ರಿಕ್ಷಾ ಚಾಲನೆ ಮಾಡಿದವರಿಗೆ ಸಮಾಜದಲ್ಲಿ ಗೌರವ ಕೊಡುವುದು ಏಲ್ಲರ ರ‍್ತವ್ಯ. ರಿಕ್ಷಾ ಚಾಲಕರು ಸರಕಾರದ ಉದ್ಯೋಗವನ್ನು ಬಯಸದೇ ತಮ್ಮ ಸ್ವಂತ ವೃತ್ತಿಯನ್ನು ಕೈಗೊಳ್ಳುವ ಮೂಲಕ ಸಮಾಜಕ್ಕೆ ತಮ್ಮದೇ ಅದ ಕೊಡುಗೆಯನ್ನು ನೀಡುತ್ತಿದ್ದಾರೆ.
ರಿಕ್ಷಾಚಾಲಕರಿಗೆ ಗೌರವವನ್ನು ಕೊಡುವುದರ ಜೊತೆಗೆ ರಕ್ಷಣೆಯನ್ನು ಕೊಡುವುದು ಕೂಡ ಸರಕಾರದ ಜವಬ್ದಾರಿ ಇತ್ತೀಚೆಗೆ ಮೂಲ್ಕಿಯ ರಿಕ್ಷಾ ಚಾಲಕರರ‍್ವರಿಗೆ ಕೇರಳ ರಾಜ್ಯಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಲಾಯಿತು. ಈ ಸಂರ‍್ಭದಲ್ಲಿ ರಿಕ್ಷಾ ಚಾಲಕರು ನೆನಪಿನಲ್ಲಿ ಇಡಬೇಕಾದ ಅಂಶ ಎನೆಂದರೆ ತಮ್ಮ ಕೆಲಸದ ವ್ಯಾಪ್ತಿಯನ್ನು ಒಳಪಟ್ಟು ಕಾರ್ಯನಿರ್ವಹಣೆ ಮಾಡಬೇಕು ಮತ್ತು ನಿಯಮಗಳಿಗೆ ಒಳಪಟ್ಟು ಕಾರ್ಯನಿರ್ವಹಣೆ ಮಾಡಿದಾಗ ಮಾತ್ರ ರಕ್ಷಣೆ ಸಿಗುತ್ತದೆ. ಇಲ್ಲದೇ ಇದ್ದಲ್ಲಿ ಇಂತಹ ಕುತಂತ್ರಗಳಿಗೆ ಬಲಿಯಾಗಬೇಕಾಗುತ್ತದೆ. ರಿಕ್ಷಾ ಚಾಲಕರ ಮೇಲಿನ ಕೊಲೆ ಪ್ರಕರಣವನ್ನು ಖಂಡಿಸಿದರು. ಇದೊಂದು ದೊಡ್ಡ ಅಘಾತಕಾರಿ ವಿಷಯ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ತಿಳಿಸಿದರು. ರಿಕ್ಷಾ ಚಾಲಕರ ಬೇಡಿಕೆಯನ್ನು ಈಡೇರಿಸಲು ನಾನು ಯಾವಾಗಲೂ ವಿಧಾನ ಪರಿಷತ್ತಿನಲ್ಲಿ ಸರಕಾರದ ಮಟ್ಟದಲ್ಲಿ ಧ್ವನಿಯನ್ನು ಎತ್ತಿದ್ದೇನೆ. ಮತ್ತು ರಿಕ್ಷಾ ಚಾಲಕರ ಮೇಲ್ಛಾವಣಿ ಘಟಕಗಳನ್ನು ಸಕ್ರಮೀಕರಣಗೊಳಿಸಲು ವಿಧಾನ ಪರಿಷತ್ತಿನಲ್ಲಿ ನಾನು ಮಂಡಿಸಿದ ವಾದವೇ ಇಂದು ರಾಜ್ಯದಲ್ಲಿ ಅನೇಕ ರಿಕ್ಷಾ ನಿಲ್ದಾಣಗಳಿಗೆ ಮೇಲ್ಚಾವಣಿ ಹಾಕುವಲ್ಲಿ ಒಂದು ಕಾರಣವಾಯಿತು. ಎಂದು ನೆನಪಿಸಿದರು.
ಬಜಪೆ ಪೋಲಿಸ್ ಇನ್ಸ್ಪೆಕ್ಟರ್ ಸಂದೀಪ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ವಿಜಯ ಗೋಪಾಲ ಸುರ‍್ಣ, ಜಬಪೆ ಮಸ್ಚಿದ್ ಅಧ್ಯಕ್ಷರು ಅಬ್ದುಲ್ ಖಾದರ್, ಕಾಂಗ್ರೆಸ್ ಮುಖಂಡರಾದ ಸಿರಾಜ್ ಬಜ್ಪೆ, ನಿಸಾರ್ ಕರಾವಳಿ ಬಜಪೆ, ರೋನಿ ಪರ‍್ಮುದೆ, ದೀಪಕ್ ಪೂಜಾರಿ, ಇಸ್ಮಾಯಿಲ್ , ರ‍್ಫೋರ‍್ಟ್ ಅಬ್ದುಲ್ ಖಾದರ್ ,ಹಿರಿಯರಾದ ಎಂ. ದೇವದಾಸ್, ಕಂಟ್ರಾಕ್ಟರ್ ಅಬೂಬಕರ್ ಸಿದ್ದಿಕ್, ಜೋಕಬ್ ಪಿರೇರಾ, ರಾಗು ಎಕ್ಕಾರ್ ಸುಹೈಲ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here