Saturday, June 14, 2025
Homeಮಂಗಳೂರುಕೆಎಂಸಿ ಮಂಗಳೂರಿನಲ್ಲಿ "ಎರೆವ್ನ 2025" ರಾಷ್ಟ್ರೀಯ ಸ್ನಾತಕ ವೈದ್ಯಕೀಯ ಸಂಶೋಧನಾ ಸಮ್ಮೇಳನದ 3ನೇ ಆವೃತ್ತಿ

ಕೆಎಂಸಿ ಮಂಗಳೂರಿನಲ್ಲಿ “ಎರೆವ್ನ 2025” ರಾಷ್ಟ್ರೀಯ ಸ್ನಾತಕ ವೈದ್ಯಕೀಯ ಸಂಶೋಧನಾ ಸಮ್ಮೇಳನದ 3ನೇ ಆವೃತ್ತಿ

ಮಂಗಳೂರು: ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ (KMC), ಮಂಗಳೂರಿನ ವಿದ್ಯಾರ್ಥಿ ಸಂಶೋಧನಾ ವೇದಿಕೆ “ಎರೆವ್ನ 2025” ರಾಷ್ಟ್ರೀಯ ಸ್ನಾತಕ ವೈದ್ಯಕೀಯ ಸಂಶೋಧನಾ ಸಮ್ಮೇಳನದ 3ನೇ ಆವೃತ್ತಿಯನ್ನು ಏಪ್ರಿಲ್ 22 ರಿಂದ 24, 2025ರವರೆಗೆ ಮಂಗಳೂರಿನ ಡಾ. ಟಿ.ಎಂ.ಎ. ಪೈ ಅಂತರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಆಯೋಜಿಸಿದೆ.

ಸಮ್ಮೇಳನದ ಉದ್ಘಾಟನೆ ಏಪ್ರಿಲ್ 22, 2025ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ MAHEಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಅವರು ಭಾಗವಹಿಸುವರು. ಸಮಾರಂಭದ ಅಧ್ಯಕ್ಷತೆಯನ್ನು MAHE ಮಂಗಳೂರು ಪ್ರೋ-ಕುಲಪತಿ ಡಾ. ದಿಲೀಪ್ ಜಿ. ನಾಯ್ಕ್ ಹಾಗೂ KMC ಮಂಗಳೂರು ಡೀನ್ ಡಾ. ಬಿ. ಉಣ್ಣಿಕೃಷ್ಣನ್ ಅವರು ವಹಿಸುವರು.

ಭಾರತದಾದ್ಯಂತದ 42 ವೈದ್ಯಕೀಯ ಕಾಲೇಜುಗಳಿಂದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರತಿಷ್ಠಿತ ಸಮ್ಮೇಳನದಲ್ಲಿ ಭಾಗವಹಿಸಲು ನೋಂದಾಯಿಸಿದ್ದಾರೆ. ಸಮ್ಮೇಳನದಲ್ಲಿ ಸುಮಾರು 300 ಪ್ರಬಂಧ ಮತ್ತು ಪೋಸ್ಟರ್ ಪ್ರಸ್ತುತಿಗಳಾಗಲಿವೆ. ಇದಲ್ಲದೆ KMC ಮಂಗಳೂರಿನ ವಿವಿಧ ವಿದ್ಯಾರ್ಥಿ ಸಂಘಟನೆಗಳ ವತಿಯಿಂದ 5 ಕಾರ್ಯಾಗಾರಗಳು, 2 ಸ್ಪರ್ಧಾತ್ಮಕ ಕ್ವಿಜ್‌ಗಳು, ಪ್ರಬಂಧ ಪ್ರಸ್ತುತಿಗಳು, ಪೋಸ್ಟರ್ ಪ್ರಸ್ತುತಿಗಳು, ಮತ್ತು ಕ್ಲಿನಿಕಲ್ ಕೇಸ್ ಚರ್ಚೆಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ CliniExperts ಮತ್ತು NJWealth ನಿಂದ ವಿಶೇಷ ಅಧಿವೇಶನಗಳನ್ನು ಆಯೋಜಿಸಲಾಗಿದೆ. ಇದಲ್ಲದೆ ಸಮ್ಮೇಳನದಲ್ಲಿ ವಿಚಾರಸಂಕಿರಣಗಳು, ಚರ್ಚಾ ಸ್ಪರ್ಧೆಗಳು, ಮಾಸ್ಟರ್‌ಕ್ಲಾಸ್‌ಗಳು ಮತ್ತು ಪ್ರಮುಖ ವೈದ್ಯಕೀಯ ಪರಿಣಿತರಿಂದ ಉಪನ್ಯಾಸಗಳು ನಡೆಯಲಿವೆ.

“ಎರೆವ್ನ 2025” ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನಾ ಕೌಶಲ್ಯ, ನವೀನತೆ ಮತ್ತು ಅಂತರ್ವಿಭಾಗೀಯ ಸಹಭಾಗಿತ್ವವನ್ನು ಉತ್ತೇಜಿಸುವ ಗುರಿ ಹೊಂದಿದೆ. ಭವಿಷ್ಯದ ಆರೋಗ್ಯ ಸೇವಾ ನಾಯಕರನ್ನು ರೂಪಿಸಲು ಮತ್ತು ಶೈಕ್ಷಣಿಕ ಉತ್ಕೃಷ್ಟತೆ ಹೆಚ್ಚಿಸಲು ಈ ಸಮ್ಮೇಳನವು ವೇದಿಕೆ ಒದಗಿಸುತ್ತದೆ. ಇದರ 3ನೇ ಆವೃತ್ತಿ ಯುವ ವೈದ್ಯಕೀಯ ಸಂಶೋಧಕರಿಗೆ ತಮ್ಮ ಸಂಶೋಧನೆಯನ್ನು ಪ್ರದರ್ಶಿಸಲು, ವಿಚಾರ ವಿನಿಮಯ ಮಾಡಲು ಮತ್ತು ಪ್ರೊಫೆಷನಲ್ ನೆಟ್‌ವರ್ಕ್ ನಿರ್ಮಿಸಲು ಅನುಕೂಲ ಕಲ್ಪಿಸುತ್ತದೆ.

RELATED ARTICLES
- Advertisment -
Google search engine

Most Popular