ರೋಟಾಲಯ ಸಂಗೀತ ಸ್ಪರ್ಧೆ

0
93


ಉಜಿರೆ: ಬೆಳ್ತಂಗಡಿ ರೋಟರಿಕ್ಲಬ್ ಮತ್ತು ಲಯನ್ಸ್ಕ್ಲಬ್‌ನ ಜಂಟಿ ಆಶ್ರಯದಲ್ಲಿ ಭಾನುವಾರ ಬೆಳ್ತಂಗಡಿಯಲ್ಲಿ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ರೋಟಾಲಯ ಸಂಗೀತ ಸ್ಪರ್ಧೆ ನಡೆಸಲಾಯಿತು.
ರೋಟರಿ ಜಿಲ್ಲಾ ಉಪರಾಜ್ಯಪಾಲ ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ ಮತ್ತು ಲಯನ್ಸ್ ಕ್ಲಬ್‌ನ ರಾಜು ಶೆಟ್ಟಿ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಫಲಿತಾಂಶ: ದೇಶಭಕ್ತಿಗೀತೆ: ಸಮೂಹ ಗಾಯನ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಸಿ), ಉಜಿರೆ (ಪ್ರಥಮ). ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ (ದ್ವಿತೀಯ)
ಭಾವಗೀತೆ: ಪ್ರಾಪ್ತಿ ಶೆಟ್ಟಿ, ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳ (ಪ್ರಥಮ). ಸ್ವಸ್ತಿಶ್ರೀ ಹೆಬ್ಬಾರ್ ಎಸ್.ಡಿ.ಎಂ., ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಸಿ), ಉಜಿರೆ (ದ್ವಿತೀಯ)
ದೇಶಭಕ್ತಿ ಸಮೂಹ ಗಾಯನ: ಎಸ್.ಡಿ.ಎಂ. ಕನ್ನಡ ಮಾಧ್ಯಮ ಪ್ರೌಢಶಾಲೆ, ಧರ್ಮಸ್ಥಳ (ಪ್ರಥಮ). ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ (ದ್ವಿತೀಯ)
ಎ. ವಿಭಾಗ: ಭಾವಗೀತೆ ಸ್ಪರ್ಧೆ: ಸನ್ನಿಧಿ, ಎಸ್.ಡಿ.ಎಂ.  ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್ ಸಿ) ಉಜಿರೆ (ಪ್ರಥಮ). ಅಂಜಲಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ  (ದ್ವಿತೀಯ)
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪ್ರಕಾಶ್ ಪ್ರಭು, ಗೀತಾಪ್ರಭು, ಕಾರ್ಯದರ್ಶಿ ಡಾ. ಎಂ. ಎಂ. ದಯಾಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಲಿಯೊ ಕ್ಲಬ್ ಅಧ್ಯಕ್ಷರಾದ ಡಾ. ಭಾಷಿಣಿ,  ಡಾ. ಶಶಿಕಾಂತ ಡೋಂಗ್ರೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಎಸ್.ಡಿ.ಎಂ. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಉಜಿರೆಯ ಬಿ. ಜನಾರ್ದನ ತೋಳ್ಪಾಡಿತ್ತಾಯ, ಸುಬ್ರಹಣ್ಯ, ಪ್ರಶಾಂತ ಬಾಳಿಗ ಬೆಳ್ತಂಗಡಿ ಮತ್ತು ಅಯ್ಯಪ್ಪ ಪ್ರಭು ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು.

ಧರ್ಮಸ್ಥಳದಲ್ಲಿ: ವಿಶ್ವಶಾಂತಿಗಾಗಿ ಇಂದು ಬಸದಿಯಲ್ಲಿ ಸಾಮೂಹಿಕ ಣಮೋಕಾರ ಮಂತ್ರ ಪಠಣ
ಉಜಿರೆ: ಧರ್ಮಸ್ಥಳದಲ್ಲಿರುವ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಬಸದಿ ಸ್ವಚ್ಛತಾ ಸಮಿತಿಯ ಆಶ್ರಯದಲ್ಲಿ ಮಂಗಳವಾರ ಅಪರಾಹ್ನ ಗಂಟೆ ೨.೩೦ ರಿಂದ ಸಮಸ್ತ ಜೈನ ಬಾಂಧವರಿAದ ಸಾಮೂಹಿಕ ಣಮೋಕಾರ ಮಂತ್ರ ಪಠಣ ನಡೆಯುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here