ರೋಟರಾಕ್ಟ್ ಕ್ಲಬ್ ಕಾರ್ಕಳ : ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0
5

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಪ್ರಾಯೋಜಕತ್ವದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾರ್ಕಳ, ಕಾಬೆಟ್ಟು ಇದರ 2026-27ನೇ ಸಾಲಿನ ರೋಟರಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ  ದಿನಾಂಕ 13.08.2026ರ ಪೂರ್ವಾಹ್ನ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.

ಪದಗ್ರಹಣ ಅಧಿಕಾರಿಯಾಗಿ ರೊ.ಡಾ.ಭರತೇಶ್ ಆದಿರಾಜರವರು ನೂತನ ಅಧ್ಯಕ್ಷರಿಗೆ ಕೊರಳ ಲಾಂಛನವನ್ನು ಹಸ್ತಾಂತರಿಸಿ ದರು . ನಿಕಟಪೂರ್ವ ಅಧ್ಯಕ್ಷರಾದ ಕು. ಮಹೇಶ ನಾಯ್ಕ ರವರಿಂದ ನೂತನ ಅಧ್ಯಕ್ಷರಾದ ಕು . ಸುಜನ್ ರವರು ಪ್ರಭಾರ ವಹಿಸಿಕೊಂಡರು..ನೂತನ ಕಾರ್ಯದರ್ಶಿ ಕು. ಕೌಶಿಕ್ ರವರು ನಿಕಟಪೂರ್ವ ಕಾರ್ಯದರ್ಶಿ ಕು. ಅಶ್ವತ್ಥ್ ರವರಿಂದ ಪ್ರಭಾರ ವಹಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್  ಕಾರ್ಕಳ ರಾಕ್ ಸಿಟಿಯ ಅಧ್ಯಕ್ಷರಾದ ರೊ ಮಂಜುನಾಥ ಹೆಗ್ಡೆ ಯವರು ವಹಿಸಿ ಸರ್ವರನ್ನು ಸ್ವಾಗತಿಸಿ , ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಸಹನಾರವರು ಶುಭಾಸಂಶನಾ ಮಾತುಗಳನ್ನು ಆಡಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಸಿವಿಲ್ ವಿಭಾಗದ ವಿಭಾಗಾಧಿಕಾರಿಗಳು ಹಾಗೂ ರೋಟರಾಕ್ಟ್ ಕ್ಲಬ್ ಸಂಚಾಲಕರಾದ ಚಿತ್ರಕುಮಾರ್ ಕೆ.ವಿ; ಕಂಪ್ಯೂಟರ್ ಸೈನ್ಸ್ ವಿಭಾಗಧಿಕಾರಿಗಳಾದ ಕುಮಾರ ಕೆ. ಎಂ., ಬೋಧಕರಾದ ಬಾಲಚಂದ್ರ ಹೆಬ್ಬಾರ್ , ಕಛೇರಿ ಮುಖ್ಯಸ್ಥರಾದ ಗುಣಪಾಲ ಜೈನ್ ಉಪಸ್ಥಿತರಿದ್ದರು.ಸಂಸ್ಥೆಯ ಇನ್ನಿತರ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಸಮಾರಂಭದಲ್ಲಿ ಭಾಗವಹಿಸಿದರು. ರೋಟರಿ ಕ್ಲಬ್ ನ ಪೂರ್ವ ಅಧ್ಯಕ್ಷರಾದ ರೊ.ಉಪೇಂದ್ರ ವಾಗ್ಲೆಯವರು ಉಪಸ್ಥಿತರಿದ್ದು, ಸಮಾರಂಭದ ಯಶಸ್ಸಿಗೆ ಸಹಕರಿಸಿದರು.