ಮಂಗಳೂರು: ರೋಟರಿ ಮಂಗಳೂರು ಸಿಟಿ ಕ್ಲಬ್ ಸಂಸ್ಥೆಯ ಪ್ರಾಯೊಜತ್ವದಲ್ಲಿ ಅಂತರಾಷ್ಟ್ರೀಯ ರೋಟರಿ ಜಿಲ್ಲಾ ೩೧೮೧ ರ ಆಡಳಿತ ಸಮಿತಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ “ಪ್ರಶಸ್ತಿ” ನಗರದ ಪಿಲಿಕುಲ ಪ್ರದೇಶದಲ್ಲಿರುವ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಸಭಾಂಗಣದಲ್ಲಿ ಇತ್ತೀಚಿಗೆ ಜರಗಿತು.
ರೋಟರಿ ಜಿಲ್ಲೆಯ ೩೧೮೧ ರ ಗವರ್ನರ್‌ರಾದ ವಿಕ್ರಮ್ ದತ್ತರವರು ಸಮಾವೇಶವನ್ನು ಉದ್ಘಾಟಿಸಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ರೋಟರಿ ಜಿಲ್ಲೆಯ ೩೧೮೨ ರ ಗವರ್ನರಾದ ದೇವಾನಂದ್, ಮಾಜಿ ಗವರ್ನರ್ ಆದ ರವೀಂದ್ರ ಭಟ್, ಲಯನ್ಸ್ ಜಿಲ್ಲಾ ಗವರ್ನಾರ್ ಆದ ಸುಬ್ರಮನ್ಯ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾಜಿ ಗವರ್ನರ್‌ರಾದ ಅಲಗು ಅಲಗಪ್ಪ ದಿಕ್ಸೂಜಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ರೋಟರಿ ಮಂಗಳೂರು ಸಿಟಿ ಸಂಸ್ಥೆಯ ವಿವಿಧ ಸಮಾಜ ಸೆವಾ ಚಟುವಟಿಕೆಗಳು, ಮತ್ತು ಜಿಲ್ಲಾ ಮಟ್ಟದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಮಧ್ಯಮ ವರ್ಗದ ಕ್ಲಬ್ ವಿಭಾಗದಲ್ಲಿ ರೋಟರಿ ಮಂಗಳೂರು ಸಿಟಿ ಸಂಸ್ಥೆಗೆ ಶ್ರೇಷ್ಠ ಮಟ್ಟದ “ಗ್ಲೋಬಲ್ ಎಕ್ಸೆಲೆನ್ಸ್” ಪ್ರಶಸ್ತಿಯನ್ನು ಕ್ಲಬ್‌ನ ಅಧ್ಯಕ್ಷರಾದ ಗಣೇಶ್ ಕೊಡ್ಲಮೊಗರುಗೆ ಪ್ರಧಾನ ಮಾಡಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುದೇಶ್, ಸಂಘಟಣಾ ಸಮಿತಿ ಅಧ್ಯಕ್ಷ ಸಮಿತ್ ರಾವ್, ಪ್ರಶಸ್ತಿ ಆಯ್ಕೆ ಸಮಿತಿಯ ಅದ್ಯಕ್ಷ ಅರವಿಂದ್ ಭಟ್, ಶ್ರೀಮತಿ ಲತಾ ದತ್ತ, ಇನ್ನರ್ ವಿಲ್ ಕ್ಲಬ್‌ನ ಅಧ್ಯಕ್ಷೆ ಶ್ರೀಮತಿ ವೈಶಾಲಿ ಕುಡ್ವ, ಮತ್ತು ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರೋಟರಿ ಮಂಗಳೂರು ಸಿಟಿ ಸಂಸ್ಥೆಯು ವಿಶೇಷವಾಗಿ ನಗರದ ಲೇಡಿಗೋಶನ್ ಆಸ್ಪತ್ರೆಯ ಹೆರಿಗೆ ಮತ್ತು ನವಜಾತ ಶಿಶುಗಳ ವಿಭಾಗವನ್ನು ಆಧುನಿಕ ಶೈಲಿಯಲ್ಲಿ, ಶ್ರೇಷ್ಠ ಮಟ್ಟಕ್ಕೆ ನವೀಕರಿಸಿದ್ದು ಕಿವುಡರಿಗೆ ಶ್ರವಣ ಯಂತ್ರೋಪರಣಗಳ ವಿತರಣೆ, ಶಾಲೆಗೆ ಮಳೆ ನೀರು ಕೊಯಿಲಿನ ಯಂತ್ರೋಪರಣಗಳ ಕೊಡುಗೆ, ಬಡ ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಣೆ, ಅನಾಥ ಆಶ್ರಮಗಳಿಗೆ ಪೀಟೋಪರಣ ಮತ್ತು ವಿದ್ಯುತ್ ಉಪಕರಣಗಳ ಕೊಡುಗೆ, ಸಾಧಕರಿಗೆ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಮಾಡಿದ್ದನ್ನು ಈ ಶ್ರೇಷ್ಠ ಸಮಾಜ ಸೇವಾ ಕಾರ್ಯಗಳನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆಯ ೮೧ ಕ್ಲಬ್‌ನ ಸುಮಾರು ೮೦೦ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.