ಸುರತ್ಕಲ್: ಚೇಳೈರುನಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದ ನಂದನ ಟ್ರಾವೆಲ್ಸ್ ನ ಬಸ್ ಸ್ಟೆರಿಂಗ್ ಜಾಮ್ ಅಗಿ ಎದುರಿಗೆ ಸುರತ್ಕಲ್ ನಿಂದ ಚೇಳೈರುಗೆ ಬರುತ್ತಿದ್ದ ಇಲೆಕ್ಟ್ ಬಸ್ ಗೆ ಮುಖಾಮುಖಿ ಡಿಕ್ಕಿಯಾಗಿ ಚೇಳೈರು ಸರಕಾರಿ ಪ್ರೌಢಶಾಲೆಯ ಎರಡು ವಿದ್ಯಾರ್ಥಿಗಳು ನಾಲ್ಕು ಟೀಚರ್ , ಡೈವರ್, ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಅಪಾಯದಿಂದ ಪಾರು ಅಗಿದ್ದಾರೆ. ಗಾಯಳುಗಳನ್ನು ಮುಕ್ಕದ ಶ್ರೀನಿವಾಸ್ ಅಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ಪತ್ರೆಗೆ ಮೂಡಬಿದ್ರೆ ಶಾಸಕರಾದ ಉಮಾನಾಥ ಎ. ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಗೋವಿಂದ ಮಡಿವಾಳ, ಸಂಚಾರಿ ವಿಭಾಗದ ಡಿ.ಸಿ.ಪಿ ರವಿಶಂಕರ್, ಮಂಗಳೂರು ಉತ್ತರ ವಲಯ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನೋ, ಚೇಳೈರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಉಪಾಧ್ಯಕ್ಷೆ ರೇಖಾ, ಅಭಿವೃದ್ಧಿ ಅಧಿಕಾರಿ ನಿತ್ಯಾನಂದ, ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಸದಸ್ಯರಾದ ಸುಧಾಕರ ಶೆಟ್ಟಿ, ಕಾಂಗ್ರೆಸ್ ಮುಖಂಡ ಕಿರಣ್ ಶೆಟ್ಟಿ ಕೆರೆಮನೆ ಮುಂತಾದವರು ಬೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದರು.
ʻನಾನು ಅಸ್ಪತ್ರೆಗೆ ಭೇಟಿ ನೀಡಿದ್ದು ಗಾಯಾಳುಗಳ ಬಗ್ಗೆ ವೈದ್ಯರಲ್ಲಿ ಮಾತನಾಡಿದ್ದು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಾಗೂ ಇತರರ ಚಿಕಿತ್ಸಾ ಖರ್ಚನ್ನು ಅಸ್ಪತ್ರೆಯವರು ಮತ್ತು ಬಸ್ ನವರು ನೀಡಬೇಕೆಂದು ಸೂಚಿಸಿದ್ದೇನೆ.
ಉಮಾನಾಥ ಕೋಟ್ಯಾನ್, ಶಾಸಕರು ಮೂಡುಬಿದಿರೆ
ಚೇಳೈರುವಿಗೆ ಖಾಸಗಿ ಬಸ್ ಮುಂಚೆ 12 ಬರುತ್ತಿದ್ದು ಈಗ ಕೇವಲ 7 ಬಸ್ ಗಳು ಮಾತ್ರ ಬರುತ್ತಿದೆ. ಸರಕಾರಿ ಬಸ್ ಮುಂಚೆ ಬರುತ್ತಿತ್ತು ಈಗ ಬರುತ್ತಾ ಇಲ್ಲ ಹಾಗಾಗಿ ಜನರಿಗೆ ಬಹಳ ಕಷ್ಟವಾಗುತ್ತಿದೆ. ಇದ್ದ ಬಸ್ ನಲ್ಲಿ ಜನರನ್ನು ತುಂಬಿಸಿಕೊಳ್ಳುವ ಅನಿವಾರ್ಯತೆ ಇದೆ. ಖಾಸಗಿ ಬಸ್ ಬಾರದಿರುವ ಬರುವ ಹಲವಾರು ಬಾರಿ ಅರ ಟಿ ಒ ಗೆ ಮನವಿ ನೀಡಿದರೂ ಪ್ರಯೋಜನವಿಲ್ಲ ಸರಕಾರಿ ಬಸ್ ನ ಬಗ್ಗೆ ಕೆ,ಎಸ್,ಅರ್,ಟಿ,ಸಿ ಅಧಿಕಾರಿಗಳಲ್ಲಿ ಮಾತನಾಡಿದಾಗ ಒಂದು ವಾರದಲ್ಲಿ ಬಸ್ ಬರುತ್ತದೆ ಎಂದು ಭರವಸೆ ನೀಡುತ್ತಾರಷ್ಟೆ ಇನ್ನಾದರೂ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳಬೇಕು.
ಜಯಾನಂದ ಚೇಳೈರು, ಚೇಳೈರು ಗ್ರಾಮ ಪಂಚಾಯತ್ ಅಧ್ಯಕ್ಷರು