ಆರ್ ಪಿ ಕಲಾ ಸೇವಾ ಟ್ರಸ್ಟ್ ( ರಿ ) ಪಾಂಬಾರು ಪುತ್ತೂರು ತಾಲೂಕು ದ. ಕ. ಜಿಲ್ಲೆ. ಅಂತರ್ ರಾಜ್ಯ ಮಟ್ಟದ ಗಾನ ಶಾರದೇ ಗಾಯನ ಸ್ಪರ್ಧೆ ಸೀಸನ್ -04 ಪ್ರಶಸ್ತಿ ಪ್ರದಾನ ಸಾಧಕರಿಗೆ ಸನ್ಮಾನ ಉಚಿತ ಕಣ್ಣಿನ ತಪಾಸಣೆ -2025

0
123

ಪುತ್ತೂರು : ದಿನಾಂಕ 15-06-2025 ನೆ ಆದಿತ್ಯವಾರ ಲಯನ್ಸ್ ಮಂದಿರ ಪುತ್ತೂರಿನಲ್ಲಿ ವಿಜೃಂಭಣೆಯಿಂದ ಜರುಗಿತು ಬೆಳಿಗ್ಗೆ 9:00 ಉದ್ಘಾಟನೆ ಶ್ರೀಧರ್ ಸಂಸ್ಥೆ ಅಧ್ಯಕ್ಷರ ನೇತೃತ್ವದಲ್ಲಿ ಮಾನ್ಯ ಮಾಜಿ ಶಾಸಕರು ಅದಾ ಶ್ರೀ ಸಂಜೀವ ಮಠ0ದೂರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಅರುಣ್ ಕುಮಾರ್ ಪುತ್ತಿಲ ಶುಭ ಹಾರೈಸಿದರು .ವಿಷನ್ ಐ ಕೇರ್ ಅಪ್ಪಿಕಲ್ಸ್ ಪುತ್ತೂರು ಇದರ ಮಾಲೀಕರಾದ ಸೃಜನ್ ಶೆಟ್ಟಿ ಕಣ್ಣಿನ ಬಗ್ಗೆ ಮಾಹಿತಿ ನೀಡಿದರು ಹಾಗೂ ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತಾ ರಾವ್, ಅರವಿಂದ್ ಭಗವಾನ್ ನಾರಾಯಣ ರೈ ಕುಕ್ಕುವಳ್ಳಿ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಪ್ರಸನ್ನ ಕುಮಾರ್ ಮಾರ್ತ ಉಪಸ್ಥಿತರಿದ್ದರು. ರಶ್ಮಿ ಕೆ ಸ್ವಾಗತಿಸಿದರು ನಿಕ್ಷಿತಾ ಎ ಧನ್ಯವಾದ ನೀಡಿದರು

ಮಧ್ಯಾಹ್ನ :03 :00 ಕ್ಕೆ ಸಮಾರೋಪ ಸಮಾರಂಭ ಜರುಗಿತು ಸಂಸ್ಥೆ ಸಂಚಾಲಕರಾದ ರವಿ ಪಾಂಬಾರು ಸಭಾ ಅಧ್ಯಕ್ಷರಾಗಿ ವಹಿಸಿದ್ದರು ಮುಖ್ಯ ಅಥಿತಿಗಳಾದ ಅಶೋಕ್ ಕುಮಾರ್ ರೈ ಮಾನ್ಯ ಶಾಸಕರು ಪುತ್ತೂರು ವಿಧಾನ ಸಭಾ ಕ್ಷೇತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ರೀ ರಾಮಚಂದ್ರ ಅಮಳ (ಪುಡಾ)ಅಧ್ಯಕ್ಷರು ನಗರ ಪ್ರಾಧಿಕಾರ ಪುತ್ತೂರು ಶುಭ ಹಾರೈಕೆ ನೀಡಿದರು ಹೇಮಾನಾಥ್ ಶೆಟ್ಟಿ ಕಾವು, ಉಮೇಶ್ ನಾಯಕ್ ಪುತ್ತೂರು, ಸದಾನಂದ ಮಾವಜಿ, ಪದ್ಮರಾಜ್ ಬಿ ಸಿ ಚಾರ್ವಕ, ವಿಜಯ್ ಕುಮಾರ್ ಸುಳ್ಯ, ರಾಮ ಪಾಂಬಾರು ಉಪಸ್ಥಿತರಿದ್ದರು.

ಸಮಾರೋಪದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ಮಂದಿ ಸಾಧಕರಿಗೆ ಅಂತರ್ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ನೀಡಲಾಯಿತು ಹಾಗೂ ಅಂತರ್ ರಾಜ್ಯ ಮಟ್ಟದ ಗಾನ ಶಾರದೇ ಗಾಯನ ಸ್ಪರ್ಧೆ ಸೀಸನ್ -4 ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು ಸೀನಿಯರ್ ವಿಭಾಗ : ಸಂಜನಾ ಪೈ ಪ್ರಥಮ, ಚೈತನ್ಯ ಶಿವಪುರ ದ್ವಿತೀಯ, ಮೇಘನಾ ರಾವ್ ತೃತೀಯ,ಹಾಗೂ ಜೂನಿಯರ್ ವಿಭಾಗ : ವೃಷ್ಟಿ ವಿ ಕೆ ಪ್ರಥಮ, ಮನಸ್ವಿ ಡಿ ಸುಳ್ಯ ದ್ವಿತೀಯ, ನಮಸ್ವಿ ಬಾಸ್ಕರ್ ತೃತೀಯ ಸ್ಥಾನ ಪಡೆದುಕೊಂಡರು. ವಿನಯ್ ಕುಮಾರ್ ಕುಮಾರ್ ಅಡ್ಯನಡ್ಕ ಸ್ವಾಗತಿಸಿದರು ಸಂದ್ಯಾ ಮಂಡೆಕೋಲು ವಂದಿಸಿದರು ರೋಹಿತ್ ಕುರಿಕ್ಕಾರ್, ಮಮತಾ ಮಡಿಕೇರಿ, ಅಪೂರ್ವ ಕಾರಂತ್ ನಿರೂಪಿಸಿದರು ಸನತ್ ಕೆ ಪ್ರಜ್ವಲ್ ಕೆ, ನವ್ಯ ಕೆ, ಹರೀಶ್ ಪಂಜಿಕಲ್ಲು, ಸಂದೀಪ್ ಅಡ್ಯನಡ್ಕ ಕಾರ್ಯಕ್ರಮದ ಸಮಗ್ರ ನಿರ್ವಹಣೆ ಹೊಂದಿದರು

LEAVE A REPLY

Please enter your comment!
Please enter your name here