Tuesday, April 22, 2025
HomeUncategorizedಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪಿ.ಯು.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಹೆಗ್ಗಡೆಯವರಿಂದ ಅಭಿನಂದನೆ

ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪಿ.ಯು.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಹೆಗ್ಗಡೆಯವರಿಂದ ಅಭಿನಂದನೆ

ಸ್ಥಳೀಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪಿ.ಯು.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಭಾನುವಾರ ಧರ್ಮಸ್ಥಳಕ್ಕೆ ಹೋಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಹೆಗ್ಗಡೆಯವರು ಅಭಿನಂದಿಸಿ ಅವರಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು.
ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು:
ವಿಜ್ಞಾನ ವಿಭಾಗ:
• ಕುಮಾರಿ ತುಷಾರ ಬಿ.ಎಸ್., (೫ನೇ ರ‍್ಯಾಂಕ್) ಪಡೆದ ಅಂಕಗಳು: ೫೯೫
• ಕುಮಾರಿ ನೀತಿ ಕೆ.ಪಿ. (೯ನೇ ರ‍್ಯಾಂಕ್) ಪಡೆದ ಅಂಕಗಳು: ೫೯೧
ವಾಣಿಜ್ಯ ವಿಭಾಗ:
• ಆರ್ಯದಿನೇಶ್ (೭ನೇ ರ‍್ಯಾಂಕ್) ಪಡೆದ ಅಂಕಗಳು: ೫೯೩
ಕಲಾ ವಿಭಾಗ:
• ಶ್ರೇಯಾ, ಎಚ್.ಎ. (೯ನೆ ರ‍್ಯಾಂಕ್) ಪಡೆದ ಅಂಕಗಳು: ೫೮೯
ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಿಂದ ಒಟ್ಟು ೧೦೯೯ ವಿದ್ಯಾರ್ಥಿಗಳು ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ಹಾಜರಾಗಿದ್ದು, ೧೦೬೯ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. ೯೭.೨೭ ಫಲಿತಾಂಶ ಬಂದಿರುತ್ತದೆ.
ಉತ್ತಮ ಫಲಿತಾಂಶಕ್ಕಾಗಿ ಹೆಗ್ಗಡೆಯವರು ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಪ್ರಾAಶುಪಾಲ ಬಿ. ಪ್ರಮೋದ್ ಕುಮಾರ್, ಉಪನ್ಯಾಸಕರು, ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular