ಎಸ್.ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ಐದು ವಿದ್ಯಾರ್ಥಿಗಳು ಜೂನ್ 4 ರಿಂದ 7ರ ತನಕ ಮಂಗಳೂರಿನ ಯೆನಪೋಯ ವಿಶ್ವ ವಿದ್ಯಾಲಯದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಗ್ಲೋಬಲ್ ಯೂಥ್ ಸಮ್ಮಿಟ್ 2025 ಕ್ಕೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿನಿ ಚಿತ್ರಶ್ರೀ ಇವರು ಸ್ಟಾರ್ಟ್ ಅಪ್ ಎಕೋ ಸಿಸ್ಟಮ್ & ಎಂಟರ್ಪ್ರೈನರ್ಶಿಪ್ ಎಂಬ ವಿಷಯದ ಕುರಿತು ಪೋಸ್ಟರ್ ಪ್ರೆಸೆಂಟೇಶನ್ ನೀಡಲಿದ್ದಾರೆ ಹಾಗೆ ಚಿತ್ರಶ್ರೀ, ವಿನೋದ್, ಸುದರ್ಶನ್, ವೀರತ್, ಗಣೇಶ್ ಇವರ ತಂಡವು ಕರಾವಳಿಯ ಯಕ್ಷಗಾನ ಮತ್ತು ಜನಪದ ಕಲೆಗಳನ್ನು ಪ್ರದರ್ಶಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಅಭಯಚಂದ್ರ ಜೈನ್, ನಿಕಟಪೂರ್ವ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಜೆ.ಜೆ ಪಿಂಟೋ, ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಅಭಿನಂದಿಸಿದರು.