
ಮಂಗಳೂರು : ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿರುವ ಸದಾನಂದ ಮೂಲ್ಯ ಅವರು ಇದೀಗ ಚಿಕಿತ್ಸಾ ಹಾಗೂ ಜೀವನ ನಿರ್ವಹಣೆಗೆ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಅನಾರೋಗ್ಯದ ಕಾರಣದಿಂದ ಸ್ವತಃ ದುಡಿದು ಜೀವನ ಸಾಗಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದ್ದು, ಕುಟುಂಬದ ಮೇಲೂ ಆರ್ಥಿಕ ಹೊರೆ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಸದಾನಂದ ಮೂಲ್ಯ ಅವರ ಚಿಕಿತ್ಸೆಗೆ ಹಾಗೂ ಅಗತ್ಯ ಜೀವನೋಪಚಾರಕ್ಕೆ ಸಹಾಯ ಮಾಡಲು ದಾನಿಗಳು, ಸಮಾಜದ ಸಹೃದಯರು ಹಾಗೂ ಸಂಘ-ಸಂಸ್ಥೆಗಳು ಮುಂದೆ ಬರಬೇಕೆಂದು ಮನವಿ ಮಾಡಲಾಗಿದೆ.
“ಮಾನವೀಯತೆ ಮಡೋಣ… ಒಂದು ನೆರವು, ಒಂದು ಜೀವಕ್ಕೆ ಆಸರೆ” ಎಂಬ ಆಶಯದೊಂದಿಗೆ, ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡುವ ಮೂಲಕ ಸದಾನಂದ ಮೂಲ್ಯ ಅವರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಲಾಗಿದೆ.
ಸಹಾಯ ಮಾಡಲು 7975348772 ಸಂಖ್ಯೆಯನ್ನು ಸಂಪರ್ಕಿಸಬಹುದು. ಪೋಸ್ಟರ್‌ನಲ್ಲಿ ನೀಡಿರುವ PhonePe ಮೂಲಕವೂ ನೆರವು ನೀಡುವಂತೆ ಮನವಿ ಮಾಡಲಾಗಿದೆ.
ಸಣ್ಣ ನೆರವು ಕೂಡ ಸಂಕಷ್ಟದಲ್ಲಿರುವ ಕುಟುಂಬಕ್ಕೆ ದೊಡ್ಡ ಆಸರೆಯಾಗಬಹುದು.
