ಸ್ಯಾಫ್ರಾನ್ ಟೈಗರ್ಸ್ ಹುಲಿವೇಷದ ಅಬ್ಬರ : 3ನೇ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ!

0
51

ಪಡುಪಣಂಬೂರು: ತುಳುನಾಡಿನ ಸಾಂಪ್ರದಾಯಿಕ ಕಲೆಯಾದ ಹುಲಿವೇಷದ ವೈಭವವನ್ನು ಮತ್ತೊಮ್ಮೆ ಅನಾವರಣಗೊಳಿಸಲು ಫ್ರೆಂಡ್ಸ್ ಪಡುಪಣಂಬೂರು ತಂಡದ ಸ್ಯಾಫ್ರಾನ್ ಟೈಗರ್ಸ್ ಸಜ್ಜಾಗಿದೆ. ಈ ತಂಡದ 3ನೇ ವರ್ಷದ ಹುಲಿವೇಷ ಕಾರ್ಯಕ್ರಮವು ಅಕ್ಟೋಬರ್ 10 ಮತ್ತು 11ರಂದು ಅದ್ಧೂರಿಯಾಗಿ ನಡೆಯಲಿದೆ.

ಅಕ್ಟೋಬರ್ 10ರಂದು ರಾತ್ರಿ 8 ಗಂಟೆಗೆ ಊದು ಪೂಜೆ ಮತ್ತು ಅಕ್ಟೋಬರ್ 11ರಂದು ಬೆಳಿಗ್ಗೆ 9 ಗಂಟೆಗೆ ಲೋಬಾನ ಸೇವೆ ನಡೆಯಲಿದೆ.

ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನ, ಪಡುಪಣಂಬೂರು ಇಲ್ಲಿ ನಡೆಯಲಿರುವ ಹುಲಿವೇಷದ ರೋಮಾಂಚನ, ತುಳುನಾಡಿನ ಸಂಸ್ಕೃತಿಯ ಸೊಗಡು ಹಾಗೂ ದೈವಿಕ ಭಕ್ತಿಯ ಸಂಗಮವಾಗಲಿರುವ ಈ ಸಂಭ್ರಮದಲ್ಲಿ ಭಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಮೆರುಗು ಹೆಚ್ಚಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ