ಸಜೀಪ : ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ 28–29 ರಂದು ಲಕ್ಷ ಜಪ ಯಜ್ಞ, ದೂರ್ವ ಹೋಮ ಹಾಗೂ ಜಾತ್ರೋತ್ಸವ

0
84

ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ ಸಜೀಪ ಮೂಡ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಿಲೇಶ್ವರ ಕೆ ಉಚ್ಚಿಲ ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಬಾಲ ಗಣಪತಿ ಮೂಲ ಮಂತ್ರ ಲಕ್ಷ ಜಪ ಯಜ್ಞ ದೂರ್ವ ಹೋಮ ಮತ್ತು ಚತುರ್ಥ ಪ್ರತಿಷ್ಠ ವರ್ಧಂತಿ ಹಾಗೂ ವಾರ್ಷಿಕ ಜಾತ್ರಾ ಉತ್ಸವ ಇದೇ 28 ಹಾಗೂ 29 ಭಾನುವಾರ ಹಾಗೂ ಸೋಮವಾರ ನಡೆಯಲಿದ್ದು , ಇದರ ಪೂರ್ವಭಾವಿ ಸಿದ್ಧತಾ ಸಭೆ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ಅಧ್ಯಕ್ಷತೆಯಲ್ಲಿ ಜರಗಿತ್ತು ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಶಂಕರನಾರಾಯಣ ಐತಾಳ್ ಓಣಿ ಬೈಲು, ಹರೀಶ್ ಬಂಗೇರ, ದೀಪಕ್ ಕೋಟ್ಯಾನ, ಸುರೇಶ್ ಬಂಗೇರ , ರಮೇಶ ಅನ್ನಪಾಡಿ , ಪ್ರಶಾಂತ್, ಭಾಸ್ಕರ , ಸತೀಶ.ಲಿಂಗಪ್ಪ ಧೊಟ, ದಿನೇಶ್ ಮೊದಲಾದವರು ಸೂಕ್ತ ಸಲಹೆ ಸೂಚನೆ ನೀಡಿದರು 26 ಶುಕ್ರವಾರದಂದು ಸಜೀಪ ಮೂಡ ಸಜೀಪ ಮುನ್ನು ರು,ಸಜೀಪ ನಡು, ಸಜೀಪ ಪಡು ಗ್ರಾಮಗಳಿಂದ ಹಸಿರು ವಾಣಿ ಹೊರೆ ಕಾಣಿಕೆ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು .

LEAVE A REPLY

Please enter your comment!
Please enter your name here