ಶ್ರೀ ಶಾರದ ಫ್ರೆಂಡ್ಸ್ ಸರ್ಕಲ್ ವಿದ್ಯಾನಗರ ಸಜೀಪ ಮುನ್ನೂರು ಇದರ ಆಶ್ರಯದಲ್ಲಿ ವಿದ್ಯಾದಾಯಿನಿ ಟ್ರೋಪಿ 2025 ಹೊನಲು ಬೆಳಕಿನ ವಾಲಿಬಾಲ್ ಪಂದ್ಯಕೂಟ ಉದ್ಘಾಟನೆಯನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಕ್ರೀಡೆಯಿಂದಾಗಿ ಜನರ ದೈಹಿಕ ಆರೋಗ್ಯ ಸುಧಾರಿಸುವುದರೊಂದಿಗೆ ಮಾನಸಿಕ ನೆಮ್ಮದಿಯನ್ನು ಕೂಡ ಒದಗಿಸುತ್ತದೆ ಸಂಘ ಸಂಸ್ಥೆಗಳು ಸಾಮಾಜಿಕ ಪಿಡುಗುವಿನ ವಿರುದ್ಧ ಜಾಗೃತಿ ಮೂಡಿಸಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದೇ ಗುರಿಯಾಗಿಸಿಕೊಳ್ಳಬೇಕೆಂದು ಹಿತನುಡಿಗಳನ್ನಾಗಿದರು. ಸಜೀಪ ಮೂಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂoಜ ವಾಲಿಬಾಲ್ ಸೀಸನ್ 2 ಲೀಗ್ ಪಂದ್ಯಕೂಟ ಉದ್ಘಾಟಿಸಿದರು. ಸಜೀಪ ಮುನ್ನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸತೀಶ್ ಗಟ್ಟಿ. ಇಬ್ರಾಹಿಂ, ಕೀರ್ತನ್ ಆಳುವ ಸಿದ್ದಿಕ್ ಕೊಳ ಕೆ ಗಣೇಶ್ ಆಳ್ವ, ಅಬ್ದುಲ್ ಖಾದರ್, ದೇವಕಿ, ಸುಂದರ ಪೂಜಾರಿ, ಧನಂಜಯ ಶೆಟ್ಟಿ ಪರಾರಿ ಗುತ್ತು, ನಿತ್ಯಾನಂದ ಪೂಜಾರಿ, ದಿವಾಕರ, ಸಂಘದ ಅಧ್ಯಕ್ಷ ಚಂದ್ರಹಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಸಜೀಪ ಮುನ್ನೂರು : ವಿದ್ಯಾದಾಯಿನಿ ಟ್ರೋಪಿ 2025 ಹೊನಲು ಬೆಳಕಿನ ವಾಲಿಬಾಲ್ ಪಂದ್ಯಕೂಟ
RELATED ARTICLES