ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀ ಪ ನಡು ಇಲ್ಲಿ ಸೋಮವಾರದಂದು ಸೂರ್ಯನಾರಾಯಣ ಐತಾಳ ನೇತೃತ್ವದಲ್ಲಿ ದೇಶ ಕಾಯುವ ಸೈನಿಕರ ಓಳಿತಿಗಾಗಿ ಭಾರತದ ಸೇನೆಗೆ ದೇವರು ಇನ್ನಷ್ಟು ಶಕ್ತಿ ನೀಡಲಿ ದೇಶ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಸಂಕಲ್ಪದೊಂದಿಗೆ ದೇವಸೇನಾ ಶ್ರೀ ಸುಬ್ರಹ್ಮಣ್ಯ ಹೋಮ ಕ್ಷೇತ್ರದಲ್ಲಿ ಜರಗಿತ್ತು. ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಅರ್ಚಕ ಗಣಪತಿ ಮಹಾಬಲೇಶ್ವರ ಭಟ್, ರಾಮಕೃಷ್ಣ ಭಟ್, ಕೆ ರಾಧಾಕೃಷ್ಣ ಆಳ್ವ, ಸುಧಾಕರ ಕೆಟಿ, ಸತ್ಯನಾರಾಯಣ ನಾಯಕ್, ಸೋಮನಾಥ ಭಂಡಾರಿ, ಪ್ರವೀಣ್ ಶೆಟ್ಟಿ, ಪ್ರವೀಣ್ ಆಳ್ವ, ಶುಭಾಷ್ ಶೆಟ್ಟಿ, ವಿಠಲ್ ಅಮೀನ್ ಯಶವಂತ ದೇ ರಾಜೇ ರಾಮ ಸುರೇಶ್ ಬಂಗೇರ, ಹರೀಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.