ಮಕರ ಸಂಕ್ರಾಂತಿಯ ಶುಭವೇಳೆ ಚಾರ ಮಹಿಷಮರ್ದಿನೀ ಅಮ್ಮನವರ ವಾರ್ಷಿಕ ಜಾತ್ರಾಮಹೋತ್ಸವದ ಪುಣ್ಯ ದಿನದಂದು ಸಕ್ಕಟ್ಟು ಲಕ್ಷೀನಾರಯಣಯ್ಯನವರ ಜನ್ಮ ಶತಮಾನೋತ್ಸವದ ಅಂಗವಾಗಿ ಸಂಸ್ಮರಣೆ ಹಾಗೂ ಶ್ರೀ ಮಹಿಷಮರ್ದಿನೀ ಯಕ್ಷಕಲಾ ಪ್ರತಿಷ್ಠಾನ (ರಿ.) ಚಾರ-ಹೆಬ್ರಿ ಇದರ ನಾಲ್ಕನೇಯ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಚಾರ ಪ್ರದೀಪ ಹೆಬ್ಬಾರ್ ವಿರಚಿತ “ಕುಂತಿ ಸಂವಾದ”(ಕೌಂತೇಯ) ಯಕ್ಷಗಾನ ತಾಳಮದ್ದಳೆ ನಡೆಯಿತು.

ಯಕ್ಷಗಾನ ಕಲೆ ಉಳಿಸಿ ಬೆಳೆಸುವುದು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಂತೆ, ಯಕ್ಷಗಾನ ಮನೆ ಮನಗಳಲ್ಲಿ ಬೆಳಗುವುದರಿಂದ ಜನರ ಸಂಸ್ಕಾರದಲ್ಲಿ ಶ್ರೇಷ್ಠತೆಯನ್ನು ಕಾಣಬಹುದು ಹಾಗೆಯೇ ಎಂದು ಹೇಳಿದರು. ಸಕ್ಕಟ್ಟುರವರ ಜನ್ಮ ಶತಾಬ್ದಿಯಲ್ಲಿ ನಾವೆಲ್ಲರು ಭಾಗಿಯಾಗುವಂತೆ ಮಾಡಿದ ಶ್ರೀಯುತ ಹೆಬ್ಬಾರರಿಗೆ ಕೃತಜ್ಞತೆಗಳು ಎಂದು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ನವೀನ ಕೆ ಅಡ್ಯಂತಾಯರವರು ನುಡಿದರು. ಬಡಗಿನಲ್ಲ ಸಕಟ್ಟುವವರು ತೆಂಕಿನಲ್ಲಿ ಮಾಲಿಂಗ ಇಬ್ಬರು ಯಕ್ಷಲೋಕ ಕಂಡ ಬಣ್ಣದ ವೇಷಧಾರಿಗಳು. ಸುಮಧುರ ಸುಂದರ ಕಾರ್ಯಕ್ರಮ ಶ್ರೀ ಸಕ್ಕಟ್ಟು ಬಣ್ಣದ ವೇಷಧಾರಿ ಎಂದೇ ಪ್ರತಿಪಾದಿತರಾದ ಸಕ್ಕಟ್ಟು ಲಕ್ಷೀನಾರಾಯಣಯ್ಯನವರು ಬಡಗುತ್ತಿಟ್ಟಿನಲ್ಲಿ ಆ ಕಾಲದಲ್ಲಿ ಮನೆಮತಾದವರು ಅವರ ಸಂಸ್ಮರಣೆ ಮಾಡುವ ಭಾಗ್ಯ ಶ್ರೀ ಪ್ರತಿಷ್ಠಾನದ ವತಿಯಿಂದ ನಮಗೆ ಅವಕಾಶ ಮಾಡಿ ಕೊಟ್ಟ ಶ್ರೀಯುತ ಹೆಬ್ಬಾರರಿಗೆ ಧನ್ಯವಾದಗಳು. ಎಂದು ಸಂಪನ್ಮೂಲ ವ್ಯಕ್ತಿ ಹೆಬ್ಬಾರ್ ಸ್ಥಾನಿಕ ಬ್ರಾಹ್ಮಣ ಸಂಘದ ಗೌರವಾಧ್ಯಕ್ಷರಾದ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್ ವ್ಯಕ್ತಪಡಿಸಿದರು.
ಒಬ್ಬ ಬಣ್ಣದ ವೇಷಧಾರಿಗೆ ಒಂದು ಬಣ್ಣದ ವೇಷ ತಯಾರು ಮಾಡಬೇಕಾದರೆ ಕನಿಷ್ಠ ಮೂರು ಗಂಟೆಯಾದರು ಸಮಯ ಬೇಕಾಗುತ್ತದೆ. ಆ ವೇಷವಾಗುವಲ್ಲಿಯವರೆಗೆ ಬಣ್ಣದ ವೇಷಧಾರಿಯ ತಾಳ್ಮೆ ಸಂಯಮ ಮೆಚ್ಚಲೇಬೇಕಾಗುತ್ತದೆ. ಅಲ್ಲದೇ ಸಕ್ಕಟ್ಟು ಎಂಬ ಮಹಾನ್ ಪುರುಷರು ಸುಮಾರು ನಾಲ್ಕೈದು ದಶಕಗಳ ಕಾಲ ಬಣ್ಣದ ವೇಷಧಾರಿಗಳಾಗಿ ರಂಗದಲ್ಲಿ ಮಿಂಚಿ ಮರೆಯಾದರು. ಅವರ ಸಂಸ್ಮರಣೆ ಮಾಡುವುದು ನಮ್ಮ ಪೂರ್ವ ಪುಣ್ಯ ವಿಶೇಷ ಎಂದು ಯಕ್ಷಕವಿ ಹಾಗೂ ಶ್ರೀ ಪ್ರತಿಷ್ಠಾನದ ಸ್ಥಾಪಕಧ್ಯಕ್ಷರು ಯಕ್ಷಕವಿಗಳಾದ ಚಾರ ಪ್ರದೀಪ ಹೆಬ್ಬಾರ್ ರವರು ಸಂಸ್ಮರಣಾ ನುಡಿಗಳನ್ನಾಡಿದರು. ಹೆಬ್ಬಾರವರ ಆಶಯದಂತೆ ಯಕ್ಷಗಾನ ಕಲೆಯನ್ನು ತಮ್ಮ ಮಕ್ಕಳಿಗೆ ತರಬೇತಿ ನೀಡುವ ಕಾರ್ಯ ಮುಂದಿನ ದಿನದಲ್ಲಿ ಶ್ರೀ ಪ್ರತಿಷ್ಠಾನದ ವತಿಯಿಂದ ಆಗಲಿ ನಿಮ್ಮೊಂದಿಗೆ ಸದಾ ಬೆನ್ನೇಲುಬಾಗಿ ನಾನು ಜೊತೆಗಿರುತ್ತೇನೆ ಹೆಬ್ಬಾರೇ ಹಾಗೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಯಕ್ಷಲೋಕದ ಮಾಸದ ಬಣ್ಢ ಸಕ್ಕಟ್ಟುವವರ ಸಂಸ್ಮರಣಾ ಕಾರ್ಯ ಅಭಿನಂದನಾರ್ಹವಾದದ್ದು ಅಲ್ವದೇ ಓರ್ವ ಸಮಾಜ ಸೇವಕ ಕೃಷಿಕರನ್ನು ಗೌರವಿಸಿ ಸನ್ಮಾನ ಮಾಡಿದ್ದು ಶ್ಲಾಘನೀಯ ಶ್ರೀಯುತ ಹೆಬ್ಬಾರರ ಆಯ್ಕೆ ಉತ್ತಮವಾಯಿತು ಎಂದು ಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷರು ಗುತ್ತಿಗೆಧಾರರು ವಾದಿರಾಜ ಶೆಟ್ಟಿ ಚಾರರವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಉದಯ ಐತಾಳ ಕಾರ್ಕಡರವರಿಗೆ ಶ್ರೀ ಪ್ರತಿಷ್ಠಾನದ ವತಿಯಿಂದ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಮಹಿಷಮರ್ದಿನೀ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಕಲಾವಿದರೆಲ್ಲರು ಸೇರಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಗೊಂಡ ಯಕ್ಷಕವಿ ಚಾರ ಪ್ರದೀಪ ಹೆಬ್ಬಾರವರನ್ನು ಹುಟ್ಟೂರಿನಲ್ಲಿ ಸನ್ಮಾನಿಸಿದರು. ಸ್ವಾಗತ ಮತ್ತು ಪ್ರಸ್ತಾವನೆಯನ್ನು ಚಾರ ಪ್ರದೀಪ ಹೆಬ್ಬಾರ್ ಮಾಡಿದರೆ, ಡಾ. ಶಿವಕುಮಾರ್ ಅಳಗೋಡರು ಕಾರ್ಯಕ್ರಮವನ್ನು ಸುಂದರ ಸುಮಧುರವಾದ ನುಡಿಮುತ್ತುಗಳಿಂದ ಸೊಗಸಾಗಿ ನಿರೂಪಿಸಿದರು.
ಕಾರ್ಯಕ್ರಮದನಂತರ ಶ್ರೀ ಪ್ರತಿಷ್ಠಾನದ ಕಲಾವಿದರಿಂದ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಚಾರ ಪ್ರದೀಪ ಹೆಬ್ಬಾರ್ ವಿರಚಿತ ಕುಂತಿ ಸಂವಾದ(ಕೌಂತೇಯ) ಯಕ್ಷಗಾನ ತಾಳಮದ್ದಲೆ ನಡೆಯಿತು. ಕಲಾವಿದರಾಗಿ ಭಾಗವತರು : ಮಲೆನಾಡಿನ ಗಾನ ಕೋಗಿಲೆ ಶಿವಶಂಕರ ಭಟ್ ಹರಿಹರಪುರ, ಮದ್ದಲೆ: ಆನಂದ ಭಟ್ ಪೆರ್ಡೂರು, ಚಂಡೆ: ವಿನೀತ್ ಹೆಗ್ಡೆ ಕಡ್ತಲ
ಕರ್ಣ : ಶ್ರೀ ಆನಂದ ಭಟ್ ಕೆಕ್ಕಾರ್, ಕೃಷ್ಣ: ಶ್ರೀ ಆದಿತ್ಯ ಹೆಗಡೆ ಯಡೂರು, ಕುಂತಿ : ಡಾ. ಶಿವಕುಮಾರ್ ಅಳಗೋಡು, ಸೂರ್ಯ : ಚಾರ ಪ್ರದೀಪ ಹೆಬ್ಬಾರ್, ಕಾರ್ಯಕ್ರಮದ ಸಂಯೋಜನೆ : ಚಾರ ಪ್ರದೀಪ ಹೆಬ್ಬಾರ್ ತಾಳಮದ್ದಲೆ ನಡೆಯಿತು.

