ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ “ವಿಶ್ವಮಾನ್ಯ ಕನ್ನಡಿಗ” ಅಂತರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ

0
123

ಬೆಳಗಾವಿಯ ನಾಗರಮುನ್ನೋಳಿಯ ಕವಿತ್ತಕರ್ಮಮಣಿ ಪೌಂಡೇಶನ್ ವತಿಯಿಂದ 70ನೇ ವರ್ಷದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಅಂತರಾಷ್ಟಿçÃಯ ಮಟ್ಟದ “ವಿಶ್ವಮಾನ್ಯ ಕನ್ನಡಿಗ” ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಲಾಲಸಾಬ ಹೆಚ್. ಪೆಂಡಾರಿಯವರು ಶೆಣೈಯವರ ನಾಲ್ಕು ದಶಕಗಳ ಸಾಧನೆಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿಯನ್ನಾಗಿ ಪರಿವರ್ತನೆ ಮಾಡಿದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಶಿಕ್ಷಣ, ಕನ್ನಡ ಭಾಷೆ ನೆಲ-ಜಲ ಕ್ಷೇತ್ರಗಳಲ್ಲಿ ಗಣನೀಯ ಸೇವೆ, ಸಾಧನೆಯ ಜೊತೆಗೆ ಪ್ರಾಥಮಿಕ ಶಾಲೆಗೆ ಸೀಮಿತವಾದ ಶೆಣೈಯವರು ಸಂಸ್ಕೃತಿಯ ಪರಿಜ್ಞಾನಗಳನ್ನು ಬೆಳೆಸಿದ ಶೆಣೈಯವರಿಗೆ ಈ ರಾಷ್ಟçಪ್ರಶಸ್ತಿ ಘೋಷಿಲಾಗಿದೆ ಎಂದು ಕವಿತ್ತಕರ್ಮಮಣಿ ಪೌಂಡೇಶನ್ ಸಮಿತಿಯವರು ವ್ಯಕ್ತಪಡಿಸಿದ್ದಾರೆ.
ಕಲಾಕುಂಚ, ಯಕ್ಷರಂಗ, ಸಿನಿಮಾಸಿರಿ, ಬಿಚ್ಕತ್ತಿ ಕುಟುಂಬ, ಶ್ರೀ ಗಾಯಿತ್ರಿ ಪರಿವಾರ, ಕರ್ನಾಟಕ ಸಗಮ ಸಂಗೀತ ಪರಿಷತ್, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here