JCI ಪರ್ಕಳದ ವತಿಯಿಂದ ಸಣ್ಣಕ್ಕಿಬೆಟ್ಟು ರಂಗಮಂಟಪದಲ್ಲಿ ನಡೆದ “Salute the Silent Star” ಪ್ರಶಸ್ತಿ ಸನ್ಮಾನ ಕಾರ್ಯಕ್ರಮ

0
23

ಪರ್ಕಳ : JCI ಪರ್ಕಳದ ವತಿಯಿಂದ ಸಣ್ಣಕ್ಕಿಬೆಟ್ಟು ರಂಗಮಂಟಪದಲ್ಲಿ ನಡೆದ “Salute the Silent Star” ಪ್ರಶಸ್ತಿ ಸನ್ಮಾನ ಕಾರ್ಯಕ್ರಮದಲ್ಲಿ ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಶ್ರೀ ಸುದೇಶ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು JFM ಭರತ್ ಕೆ ಕುಲಾಲ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಣ್ಣಕ್ಕಿಬೆಟ್ಟು ಫ್ರೆಂಡ್ಸ್‌ನ ಗೌರವಾಧ್ಯಕ್ಷರಾದ ವಿಜಯ ಶೆಟ್ಟಿ ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ಸಣ್ಣಕ್ಕಿಬೆಟ್ಟು ಫ್ರೆಂಡ್ಸ್‌ನ ಅಧ್ಯಕ್ಷರಾದ ಅರುಣೋದಯ ಶೆಟ್ಟಿಗಾರ್ ಹಾಗೂ ಸಂಸ್ಥಾಪಕ ಅಧ್ಯಕ್ಷರಾದ Jc ಅಚ್ಯುತ್ ನಾಯ್ಕ್ ಉಪಸ್ಥಿತರಿದ್ದರು.

“ಗ್ಯಾಲಕ್ಸಿ ಟ್ರೇಡರ್ಸ್” ಸಂಸ್ಥೆಯ ಮೂಲಕ ಹಲವರಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಸುದೇಶ ಪೂಜಾರಿ ಅವರು ಡಿಜಿಟಲ್ ಇಂಡಿಯಾದ ಭಾಗವಾಗಿ ಹಳ್ಳಿ ಹಳ್ಳಿಗೂ ನೆಟ್ವರ್ಕ್ ಕನೆಕ್ಷನ್ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಓಎಫ್‌ಸಿ ಕೇಬ್ಲಿಂಗ್ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಅವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜೇಸಿಐ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಧನ್ಯವಾದವನ್ನು Jc ಸನತ್ ಶೆಟ್ಟಿಗಾರ್ ಸಮರ್ಪಿಸಿದರು.

LEAVE A REPLY

Please enter your comment!
Please enter your name here