ಬೆಂಗಳೂರು : ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಸಂಪಾಜೆ ರಂಗ ಸಂಗಮ ಬೆಂಗಳೂರು ವತಿಯಿಂದ ‘ಸಂಪಾಜೆ ಸಾಂಸ್ಕೃತಿಕ ಸಂಭ್ರಮ – 2026’ ಕಾರ್ಯಕ್ರಮವು ಜೂನ್ 21ರಂದು ಭಾನುವಾರ ಮಧ್ಯಾಹ್ನ 2.30ರಿಂದ ರಾತ್ರಿ 8.30ರವರೆಗೆ ಬೆಂಗಳೂರಿನ ಜೆ.ಸಿ. ರಸ್ತೆಯ ನಯನ ರಂಗಮಂದಿರದಲ್ಲಿ ನಡೆಯಲಿದೆ.
ಸಂಜೆ 6.15ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಕಿರುತರೆ ಹಾಗೂ ಬೆಳ್ಳಿತೆರೆ ಕಲಾವಿದರಾದ ಶಂಕರ್ ಭಟ್ ಮತ್ತು ಸುರೇಶ್ ರೈ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರು ಹಾಗೂ ಚಲನಚಿತ್ರ ಕಲಾವಿದರಾದ ಗಂಡಸಿ ಸದಾನಂದಸ್ವಾಮಿ ವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಪದ್ಮನಾಭ ಜತ್ತಿಲ, ತುಳುವೆರೆ ಚಾವಡಿಯ ಗೌರವಾಧ್ಯಕ್ಷ ಪುರುಷೋತ್ತಮ ಚೇಂಡ್ಲ, ಟಿವಿ9 ಕನ್ನಡದ ವರದಿಗಾರ ಕಿರಣ್ ಹನಿಯಡ್ಕ, ಸಂಸ್ಕೃತ ವಿದ್ವಾಂಸ ಡಾ. ಗಣಪತಿ ಹೆಗಡೆ ಹಾಗೂ ಹಿರಿಯ ಪತ್ರಕರ್ತ ಮತ್ತು ಚಲನಚಿತ್ರ ನಿರ್ದೇಶಕ ರಮೇಶ ಸುರ್ವೆ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಮಾಜಸೇವಕ ಎಂ. ಕುಪ್ಪುಸ್ವಾಮಿ, ಜೆ.ಎಂ. ಎಂಟರ್‌ಪ್ರೈಸಸ್‌ನ ಮಾಲೀಕ ಜೆ.ಎಂ. ಮಣಿ ಹಾಗೂ ನ್ಯೂಸ್ 18 ಕನ್ನಡದ ವಿನುತಾ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ತುಕಾರಾಂ ಆಚಾರ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಗುವುದು. ಅಲ್ಲದೆ ಆದರ್ಶ ದಂಪತಿ ಗೌರವಕ್ಕೆ ಎನ್. ಲೀಲಾವತಿ ಮತ್ತು ಟಿ.ಎಸ್. ನಾಗರಾಜ ಉಪಾಧ್ಯಾಯ, ಹಾಗೂ ಸರೋಜ ಮತ್ತು ಪರಮೇಶ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಎಲ್.ಡಿ. ವೆಂಕಟನಾರಾಯಣ, ಶೋಭ ಭಾಸ್ಕರ್, ಮಹಾಬಲೇಶ್ವರ ಭಟ್, ರವಿ ಹಾಗೂ ಚೇತನ್ ಕೆ. ಗೌಡ ಅವರನ್ನು ಅಭಿನಂದಿಸಲಾಗುವುದು ಎಂದು ಆಯೋಜಕರಾದ ರಾಜ್ ಸಂಪಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

