ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರು ಶಿರ್ಲಾಲು ಶ್ರೀಲೋಕನಾಥೇಶ್ವರ ದೇವರ ಪ್ರತಿಷ್ಠಾ ಸ್ಥಾಪನ ದಿನ ಮತ್ತು 26, ನೇ ವರ್ಷದ ಅಹೋರಾತ್ರಿ ಭಜನೋತ್ಸವ ಕಾರ್ಯಕ್ರಮ , ಗುರುವಾರ,ದೇವಸ್ಥಾನದಲ್ಲಿ ನಡೆಯಿತು. ಮಧ್ಯಾಹ್ನ ದೇವರಿಗೆ ವಿಶೇಷ ಪೂಜೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು ಮಧ್ಯಾಹ್ನ 12:30 ರಿಂದ ಶುರುವಾಗಿ ರಾತ್ರಿ 12:30ಕ್ಕೆ ಮಂಗಳೋತ್ಸವ, ನಡೆಯಿತು.
ಸಂಜೆ 6,ರಿಂದ ,7,ರವರೆಗೆ ಸ್ಥಳಿಯ 10, ತಂಡ ಮಕ್ಕಳ ಕುಣಿತ ಭಜನಾ ತಂಡಗಳಿಂದ , ಭಜನಾ, ಕಮ್ಮಟೋತ್ಸವ, ನಡೆಯಿತು, ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಆಡಳಿತ ಸಮಿತಿ ಮುಖ್ಯಸ್ಥರು ಸಮಿತಿಯ ಸದಸ್ಯರು ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷರು ಸರ್ವ ಸದಸ್ಯರು ಶ್ರೀದೇವಿ ಮಹಿಳಾ ಕೇಂದ್ರದ ಅಧ್ಯಕ್ಷರು ಸರ್ವ ಸದಸ್ಯರು ಊರಿನ ಪರ ಊರಿನ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.