ಸೀತಾರತ್ನ ಸಿ. ಮುನ್ನಿಪಾಡಿ ನಿಧನ

0
19

ಮಂಜೇಶ್ವರ : ತಾಲೂಕಿನ ಮಿಯಪಾದವು ಸಮೀಪದ ಮುನ್ನಿಪಾಡಿಯ ನಿವಾಸಿ, ಚಂದ್ರಶೇಖರ್ ಅವರ ಧರ್ಮಪತ್ನಿ ಸೀತಾರತ್ನ ಸಿ. ಮುನ್ನಿಪಾಡಿ ಅವರು ಆ.25ರಂದು ನಿಧನರಾದರು.

ಅವರು ಪ್ರಗತಿಪರ ಕೃಷಿಕ ಹಾಗೂ ಧಾರ್ಮಿಕ ಮುಂದಾಳು ದಿ. ನಾರಾಯಣ ಮೂಲ್ಯ ಅವರ ಸೊಸೆಯಾಗಿದ್ದರು. ಮೃತರು ಓರ್ವ ಪುತ್ರ, ತಾಯಿ, ಓರ್ವ ಅಕ್ಕ ಹಾಗೂ ನಾಲ್ವರು ಸಹೋದರರನ್ನು ಅಗಲಿದ್ದಾರೆ.

ಸೀತಾರತ್ನ ಅವರ ನಿಧನಕ್ಕೆ ಕಾಸರಗೋಡು ಜಿಲ್ಲಾ ಕುಲಾಲ ಸಂಘ ತೀವ್ರ ಸಂತಾಪ ಸೂಚಿಸಿದ್ದು, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದೆ.