ಬಿಲ್ಲವ ಸೇವಾ ಸಂಘ ಕರಂದಕ್ಕಾಡ್ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0
4

ಕಾಸರಗೋಡು: ಬಿಲ್ಲವ ಸೇವಾ ಸಂಘ (ರಿ ) ಕರಂದಕ್ಕಾಡ್ ಕಾಸರಗೋಡು, ಇದರ ಮಹಿಳಾ ಘಟಕದ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೀರ್ತಿ ಎನ್ ಮಹೇಶ್ ಉಪಾಧ್ಯಕ್ಷರುಗಳಾಗಿ ಗೀತಾ ಎಸ್, ರೋಹಿಣಿ, ಶುಭಾ ಎಂ ಇವರೂ, ಕಾರ್ಯದರ್ಶಿಯಾಗಿ ತೇಜಶ್ರೀ ಎಸ್, ಜೊತೆ ಕಾರ್ಯದರ್ಶಿಗಳಾಗಿ ಚೇತನ, ಸವಿತಾ, ಜಾಲಜಾಕ್ಷಿ, ಇವರೂ ಖಜಾಂಜಿಯಾಗಿ ಆಸ್ತಿಕ ಇವರು ಆಯ್ಕೆಯಾದರು.ಸಮಿತಿ ಸದಸ್ಯರುಗಳಾಗಿ ಪಾರ್ವತಿ, ಬೇಬಿ, ರತ್ನ, ಚಂದ್ರಕಲಾ, ವೀಣಾ ಮೈಂದಪ್ಪ, ಸೌಮ್ಯ, ದೀಪಿಕ, ಹೇಮಾ, ಸವಿತಾ, ಇವರು ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ರಘು ಕೆ ಮೀಪುಗುರಿ ಇವರು ಅಧ್ಯಕ್ಷತೆ ವಹಿಸಿದರು. ಖಜಾಂಜಿ ಶಮ್ಮಿ ಕುಮಾರ್, ಗೌರವಾಧ್ಯಕ್ಷರಾದ ಕೇಶವ ಕೊಲ್ಕೆಬೈಲ್, ಸಂತೋಷ್ ಎ, ಇವರು ಮಾತನಾಡಿದರು. ಮುಖ್ಯ ಕಾರ್ಯದರ್ಶಿ ಹರಿಕಾಂತ್ ಕಾಸರಗೋಡು ಸ್ವಾಗತಿಸಿ ನೂತನವಾಗಿ ಆಯ್ಕೆಯಾದ ಮಹಿಳಾ ಘಟಕದ ಕಾರ್ಯದರ್ಶಿ ತೇಜಶ್ರೀ ಎಸ್ ಇವರು ಧನ್ಯವಾದಗೈದರು.