ದಯಾನಂದ ಶೆಟ್ಟಿ ಹಾಗೂ ಅರುಣ್ ರೈ ಗೌರವ ಅಧ್ಯಕ್ಷರಾಗಿ ಮರು ಆಯ್ಕೆ; ಜಯಕುಮಾರ್ ಪೂಜಾರಿ ನೂತನ ಗೌರವ ಅಧ್ಯಕ್ಷರಾಗಿ ಆಯ್ಕೆ
ಕಿರಣ್ ಕುಲಾಲ್ ಸಾಣೂರು ( ಅಧ್ಯಕ್ಷರು )

ತೋಡಾರು : ಸಮಾಜಸೇವೆ, ಶೈಕ್ಷಣಿಕ ನೆರವು, ಆರೋಗ್ಯ ಜಾಗೃತಿ, ಪರಿಸರ ಸಂರಕ್ಷಣೆ ಹಾಗೂ ವಿವಿಧ ಜನೋಪಯೋಗಿ ಕಾರ್ಯಗಳ ಸಕಾರಾತ್ಮಕ ಬದಲಾವಣೆ ತರಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಸಂಸ್ಥಾಪಕರಾದ ಸುಕೇಶ್ ಜಿ. ಅಂಚನ್ ಅವರ ನೇತೃತ್ವದಲ್ಲಿ ಆರಂಭಗೊಂಡ ನವಚೇತನ ಸೇವಾ ಬಳಗ (ರಿ.) ತೋಡಾರು ತಂಡವು ಕಳೆದ 5 ವರ್ಷಗಳಿಂದ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಬಡವರ ಸೇವೆಯೇ ದೇವರ ಸೇವೆ ಎಂಬ ಸಂಕಲ್ಪದೊಂದಿಗೆ ಸಾಗುತ್ತಿರುವ ತಂಡವು 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿದೆ.
ಪಲ್ಲವಿ ಅಂಚನ್ ಮಿಜಾರ್ ( ಕಾರ್ಯದರ್ಶಿ )

ಗೌರವ ಅಧ್ಯಕ್ಷರಾಗಿ ದಯಾನಂದ ಶೆಟ್ಟಿ ತೋಡಾರು ಹಾಗೂ ಅರುಣ್ ರೈ ತೋಡಾರು ಅವರು ಮರು ಆಯ್ಕೆಯಾಗಿದ್ದು, ಜಯಕುಮಾರ್ ಪೂಜಾರಿ ತೋಡಾರು ಅವರು ಹೊಸದಾಗಿ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ಲಷ್ಮಿಶ್ ಶೆಟ್ಟಿ ಮಿಜಾರ್, ಕೃಷ್ಣನಂದ ಪೂಜಾರಿ ಹಾಗೂ ಗಣೇಶ್ ಪೂಜಾರಿ ವೇಣೂರು ಅವರನ್ನು ನೇಮಕ ಮಾಡಲಾಗಿದೆ.
ತಂಡದ ನಿರ್ವಹಣಾ ವಿಭಾಗದಲ್ಲಿ ದಿನಕರ್ ಪೂಜಾರಿ ಮಿಜಾರ್, ದಾಮೋದರ್ ಕುಮಾರ್ ಮಿಜಾರ್ ಹಾಗೂ ದಿನಕರ್ ಅಮೀನ್ ಮಾರ್ನಾಡ್ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಧ್ಯಕ್ಷರಾಗಿ ಕಿರಣ್ ಕುಲಾಲ್ ಸಾಣೂರು, ಉಪಾಧ್ಯಕ್ಷರಾಗಿ ಪ್ರಸಾದ್ ಪೂಜಾರಿ ಕಾಶಿಪಟ್ನ ಹಾಗೂ ಅಭಿ ಪೂಜಾರಿ ಉಳೆಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಪಲ್ಲವಿ ಅಂಚನ್ ಮಿಜಾರ್, ಜೊತೆ ಕಾರ್ಯದರ್ಶಿಯಾಗಿ ದಯಾನಂದ ದೇವಾಡಿಗ ವೇಣೂರು ಹಾಗೂ ಕೋಶಾಧಿಕಾರಿ ರೋಷನ್ ಪೂಜಾರಿ ಪೆರಿಂಜೆ ಅವರು ಆಯ್ಕೆಯಾಗಿದ್ದಾರೆ.
ಪ್ರಚಾರ ವಿಭಾಗದ ಪ್ರಮುಖರಾಗಿ ಅಶೋಕ್ ಪೂಜಾರಿ ಪುತ್ತಿಗೆ, ಸುಮಂತ್ ಕುಲಾಲ್ ಸಾಣೂರು, ಪೂರ್ಣಿಮಾ ಕೋಟ್ಯಾನ್ ಮಾರ್ನಾಡ್ ಹಾಗೂ ವಿಜೇತ್ ವಿ. ಪೂಜಾರಿ ಬೆಳುವಾಯಿ ಅವರು ನೇಮಕಗೊಂಡಿದ್ದಾರೆ.
ನೂತನ ಪದಾಧಿಕಾರಿಗಳಿಗೆ ತಂಡದ ಸದಸ್ಯರು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದು, ಸಮಾಜಸೇವೆಯ ಪಥದಲ್ಲಿ ಇನ್ನಷ್ಟು ಜನಪರ ಕಾರ್ಯಗಳನ್ನು ಕೈಗೊಂಡು ತಂಡದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅದೇ ವೇಳೆ ಕಳೆದ 2025-26ನೇ ಸಾಲಿನಲ್ಲಿ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದವರ ಸೇವೆಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಲಾಯಿತು. ಅವರ ನಿಸ್ವಾರ್ಥ ಸೇವೆ, ಸಮರ್ಪಣಾ ಮನೋಭಾವ ಹಾಗೂ ಅವಿರತ ಪರಿಶ್ರಮದಿಂದ ತಂಡವು ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಜನಮನ್ನಣೆಗಳಿಸಿದೆ ಎಂದು ಪ್ರಶಂಸಿಸಲಾಯಿತು.
ಜನಸೇವೆ ಮತ್ತು ಸಮಾಜದ ಒಳಿತಿನ ಆಶಯದಿಂದ ಆರಂಭಗೊಂಡ ನವಚೇತನ ತಂಡವು ನೂತನ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಹೊಸ ಚೈತನ್ಯ ಮತ್ತು ಹೊಸ ಚಿಂತನೆಗಳೊಂದಿಗೆ ಮುನ್ನಡೆಯಲಿದ್ದು, ಇನ್ನಷ್ಟು ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳುವ ಸಂಕಲ್ಪ ಹೊಂದಿದೆ.

