ಮಂಗಳೂರು : ನಾಗರಾಜ್ ಉಪಾಧ್ಯಾಯ ಯಾವುದೇ ಸಂಘಟನೆಗಳು ಒಗ್ಗಟ್ಟಿನಿಂದ ಸಮಾಜಮುಖಿ ಚಿಂತನೆಯಿಂದ ಸಂಘಟಿತರಾಗಿ ಕೆಲಸಗಳು ಮಾಡಿದಾಗ ಸಮಾಜ ಸುಧಾರಣೆ ಸಾಧ್ಯ ಸ್ವಸ್ಥ ಸಮಾಜವೂ ಸಾಧ್ಯ ಎಂದು ಕರ್ನಾಟಕ ಬ್ಯಾಂಕ್ ಪ್ರಧಾನ ಕಛೇರಿಯ ಮಹಾ ಪ್ರಬಂಧ ನಾಗರಾಜ್ ಉಪಾಧ್ಯಾಯ ಅಭಿಪ್ರಾಯ ಪಟ್ಟರು. ಅವರು ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆಯು ಪಾಂಡೇಶ್ವರದ ಶ್ರೀ ಗುರು ನರಸಿಂಹ ಸಭಾಭವನದಲ್ಲಿ ಆಯೋಜಿಸಿದ ವಾರ್ಷಿಕ ಮಹಾಸಭೆಯ ಮುಖ್ಯ ಅತಿಥಿಯಾಗಿದ್ದರು ಸಂಘಟನೆಗಳ ಮೂಲಕ ಸಮಾಜ ಸೇವೆ, ಶಿಕ್ಷಣ ,ಆರೋಗ್ಯ ,ಮತ್ತು ಆಯಾಯ ಸಮಾಜದ ಬಡವರ ಅಭಿವೃದ್ಧಿಯಂತ ಕಲ್ಯಾಣ ಕಾರ್ಯಗಳನ್ನು ವ್ಯವಸ್ಥಿತವಾಗಿ ಮಾಡಬಹುದು.

ಈ ನಿಟ್ಟಿನಲ್ಲಿ ಕೂಟ ಮಹಾಜಗತ್ತು ಮಂಗಳೂರು ಅಂಗ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಲೇಬೇಕು ಎಂದರು. ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇಲ್ಲಿನ ಅಧ್ಯಕ್ಷರಾದ ಪ್ರಕಾಶ್ ಕಾರಂತ್ ಶುಭ ಹಾರೈಸಿದರು. ಕೇಂದ್ರ ಸಂಸ್ಥೆಯ ಅಧ್ಯಕ್ಷ ಏಚ್ ಸತೀಶ್ ಹಂದೆ ಕೇಂದ್ರ ಸಂಸ್ಥೆಗೂ ಅಂಗ ಸಂಸ್ಥೆಗಳಿಗೂ ಇರುವ ಬಾಂಧವ್ಯದ ಬಗ್ಗೆ ಮಾತನಾಡಿ ಪ್ರಸ್ತುತ ರಾಜ್ಯಾದ್ಯಂತ 38 ಅಂಗಸಂಸ್ಥೆಗಳಿದ್ದು, ಎಲ್ಲಾ ಅಂಗಸಂಸ್ಥೆಗಳು ವ್ಯವಸ್ಥೆಯ ಅಡಿ ಉತ್ತಮ ಕಾರ್ಯಗಳನ್ನು ಮಾಡುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ ಮಂಗಳೂರು ಅಂಗಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಮಾತನಾಡುತ್ತಾ ಮಂಗಳೂರು ಅಂಗಸಂಸ್ಥೆಯು ಬೆಳೆದು ಬಂದ ದಾರಿ ಅಲ್ಲದೆ ಸಂಘಟನೆಯಿಂದ ಉತ್ತಮ ಸಮನ್ವಯ ಉಂಟಾಗಿ ಪರಸ್ಪರ ಸಹಕಾರ ಸೌಹಾರ್ದತೆ ಹೆಚ್ಚುವಂತಾಗಬೇಕು ಈ ನಿಟ್ಟಿನಲ್ಲಿ ನಮ್ಮ ಅಂಗ ಸಂಸ್ಥೆಯ ಪ್ರಯತ್ನಗಳು ಸಾಗುತ್ತಿದೆ ಅಲ್ಲದೆ ಈ ವರ್ಷ 73 ವಾರ್ಷಿಕ ಕೇಂದ್ರಾಧಿವೇಶನದ ಆತಿಥ್ಯ ನಮ್ಮ ಪಾಲಾಗಿದ್ದು ನಮ್ಮೆಲ್ಲ ಬಾಂದವರು ಇದೊಂದು ಮಾದರಿ ಕಾರ್ಯಕ್ರಮ ಆಗುವಹಾಗೆ ಕೈಜೋಡಿಸಬೇಕು ಎಂದರು. ಬಿಲಿಯನ್ ಫೌಂಡೇಶನ್ ಅಧ್ಯಕ್ಷ ಸದಾನಂದ ಹೇರಳೆ ಇವರು ಫೌಂಡೇಶನ್ ಕೂಟ ಸಮಾಜದ ಒಂದು ಅಂಗವಾಗಿದ್ದು ಸಮಾಜದ ಆರ್ಥಿಕವಾಗಿ ಸಶಕ್ತರಾದವರಿಗೆ ಸರ್ವ ಸಹಕಾರವನ್ನು ಮಾಡುತ್ತಿದ್ದು ಇದಕ್ಕೂ ಸಮಾಜದ ಎಲ್ಲರೂ ಕೈಜೋಡಿಸಬೇಕೆಂದರು.
ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ವಾರ್ಷಿಕ ವರದಿಗಳನ್ನು ಮಂಡಿಸಿ ಕೋಶಾಧಿಕಾರಿ ಪದ್ಮನಾಭ ಮಯ್ಯ ಲೆಕ್ಕಪತ್ರಗಳನ್ನು ಮಂಡಿಸಿದರು. ಉಪಾಧ್ಯಕ್ಷ ಪ್ರಭಾಕರ ಐತಾಳ್ ಸ್ವಾಗತಿಸಿ ಜೊತೆ ಕಾರ್ಯದರ್ಶಿ ರವಿಚಂದ್ರ ಹೊಳ್ಳ ನಿರೂಪಿಸಿದರು. ಕಾರ್ಯಕ್ರಮದಲ್ಲಿ 80 ವರ್ಷ ತುಂಬಿದ ವಯೋಮಾನದವರನ್ನು ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ವೇದಪಾಠದ ವಿದ್ಯಾರ್ಥಿಗಳಾದ ಅಮೃತ್ ಹೊಳ್ಳ, ನೀರಜ್ ಸೋಮಯಾಜಿ ವೇದಮಂತ್ರ ವಾಚಿಸಿದರು.

