ಸೇವೆಯೇ ಸಂಘಟನೆಯ ಶಕ್ತಿ: ಸದಸ್ಯನ ಚಿಕಿತ್ಸೆಗೆ ಯುವವಾಹಿನಿ (ರಿ.) ಮಾಣಿ ಘಟಕದಿಂದ ₹50 ಸಾವಿರ ಧನಸಹಾಯ

0
6

ಮಾಣಿ: ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಯುವವಾಹಿನಿ (ರಿ.) ಮಾಣಿ ಘಟಕವು ತನ್ನ ‘ಯುವ ಆರೋಗ್ಯ ಸ್ಪರ್ಶ’ ಯೋಜನೆಯಡಿ ಮತ್ತೊಂದು ಮಾನವೀಯ ಸೇವೆಯನ್ನು ನೆರವೇರಿಸಿದೆ.

ಘಟಕದ ಸಕ್ರಿಯ ಸದಸ್ಯರಾದ ಯಶೋಧರ ಕೊಡಾಜೆ (ಮಾಣಿ ಗ್ರಾಮದ ದೈವಪಾತ್ರಿ) ಆಲ್ಕಾಪ್ಟೋನೂರಿಯಾ ಎಂಬ ಎಲುಬುಗಳಿಗೆ ಸಂಬಂಧಿಸಿದ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ಹಲವು ವರ್ಷಗಳಿಂದ ನಿರಂತರ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಹೆಚ್ಚಿನ ವೆಚ್ಚವಾಗುತ್ತಿರುವ ಹಿನ್ನೆಲೆಯಲ್ಲಿ, ಅವರ ಆರೋಗ್ಯ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಯುವ ಆರೋಗ್ಯ ಸ್ಪರ್ಶ ಯೋಜನೆಯಡಿ ₹50,000/- ಧನಸಹಾಯವನ್ನು ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ವಿತರಿಸಲಾಯಿತು.

ಧನಸಹಾಯ ವಿತರಣಾ ಮಾಡಿ ಮಾತನಾಡಿದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ ಪಡ್ಪು “ಸಂಘಟನೆಯ ಸದಸ್ಯರು ಸಂಕಷ್ಟದಲ್ಲಿದ್ದಾಗ ಅವರೊಂದಿಗೆ ನಿಲ್ಲುವುದು ಯುವವಾಹಿನಿಯ ಸಾಮಾಜಿಕ ಬದ್ಧತೆಯಾಗಿದೆ. ಸೇವೆಯ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯವನ್ನು ಯುವವಾಹಿನಿ ನಿರಂತರವಾಗಿ ಮುಂದುವರಿಸಲಿದೆ,” ಎಂದರು.

ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಸಾಯಿ ಕೊಡಾಜೆ, ಕೇಂದ್ರ ಸಮಿತಿಯ ಮಾಜಿ ಕೇಂದ್ರ ಅಧ್ಯಕ್ಷ ರಾಜೇಶ್ ಸುವರ್ಣ ಬಂಟ್ವಾಳ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಮಾಣಿಯ ಗೌರವಾಧ್ಯಕ್ಷ ಈಶ್ವರ ಪೂಜಾರಿ, ನೇರಳಕಟ್ಟೆ ರೈತರ ಸೇವಾ ಸಂಘದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಸಂಜೀವ ಪೂಜಾರಿ, ಯುವ ವಾಹಿನಿ ಮಾಣಿ ಘಟಕದ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಕೋಶಾಧಿಕಾರಿ ತ್ರಿವೇಣಿ ರಮೇಶ್, ಆರೋಗ್ಯ ನಿರ್ದೇಶಕಿ ರತಿ ಕಡೆಶಿವಾಲಯ,,ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಹರೀಶ್ ಬಾಕಿಲ,ಮಾಜಿ ಅಧ್ಯಕ್ಷರಾದ ಜಯಂತ ಬರಿಮಾರು ರವಿ ಚಂದ್ರ ಬಾಬನ ಕಟ್ಟೆ ಪ್ರಶಾಂತ್ ಅನಂತಾಡಿ ರಮೇಶ್ ಪೂಜಾರಿ ಮುಜಲ, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here