ಅಲಂಗಾರು ಪರಿಸರದ ಮಾರ್ಪಾಡಿ ಚಂದ್ರಪುರ ಮತ್ತು ಉಳಿಯ ಪ್ರದೇಶಗಳಲ್ಲಿ ಭಾರಿ ಗಾಳಿ ಮಳೆಗೆ ಹಲವಾರು ಮನೆಗಳು ಹಾನಿ

0
13

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಆಲಂಗಾರು ಪರಿಸರದ ಮಾರ್ಪಾಡಿ ಚಂದ್ರಪುರ ಮತ್ತು ಉಳಿಯ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ಹಲವಾರು ಮನೆಗಳು ಹಾನಿಗೊಂಡಿದೆ.

ಅಪ್ಪಿ ಎಂಬವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಓರ್ವ ಹುಡುಗಿಗೆ ಗಾಯವಾಗಿದೆ. ಘಟನಾ ಸ್ಥಳಕ್ಕೆ ಮೂಡುಬಿದಿರೆ ಬ್ಲಾಕ್ ವಕ್ತಾರ ರಾಜೇಶ್ ಕಡಲಕೆರೆ, ಬ್ಲಾಕ್ ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಸಂದೀಪ್ ರೋಡ್ರಿಗಸ್, ಅನೀಶ್ ಡಿ’ಸೋಜಾ, ಡೆನು ಅಲಂಗಾರ್ ಹಾಗೂ ಅಶ್ವಿತ್ ಭೇಟಿ ನೀಡಿದರು. ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕ ರವಿ ಮಲ್ಯ ಸ್ಥಳಕ್ಕೆ ಆಗಮಿಸಿ ಹಾನಿಯ ಕುರಿತು ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here