ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾರದಾ ಪೂಜಾ ಮಹೋತ್ಸವ‌

0
31

ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ನಡೆದ ಶಾರದಾ ಪೂಜೆ

ಸಚ್ಚೇರಿಪೇಟೆ : ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಟೋಬರ್ 17ರ ಶನಿವಾರದಂದು ಶಾಲಾ ಸಭಾಂಗಣದಲ್ಲಿ ಶಾರದಾ ಪೂಜಾ ಮಹೋತ್ಸವವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಕಜೆ ಶ್ರೀ ಮಹಾಮಾಯಿ ಕ್ಷೇತ್ರದ ಪ್ರಧಾನ ಅರ್ಚಕರಾದ ಅನಂತ ಕೃಷ್ಣ ಆಚಾರ್ಯರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಭಕ್ತಿಭಾವದಿಂದ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ಕೆಪ್ಲಾಜೆಯ ಶ್ರೀ ಮಹಾಮಾಯಿ ಮಕ್ಕಳ ಭಜನಾ ಮಂಡಳಿಯ ವತಿಯಿಂದ ಆಕರ್ಷಕ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು. ಮಕ್ಕಳ ಭಕ್ತಿಪೂರ್ಣ ಭಜನೆ ಹಾಗೂ ಕುಣಿತವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಕಾರ್ಯಕ್ರಮದಲ್ಲಿ ಮುಂಡ್ಕೂರು–ಕಡಂದಲೆ ಲಯನ್ಸ್ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ MJF ಡಾ. ರಾಜಾರಾಮ್ ರೈ, ಸಂಚಾಲಕರಾದ ಲ. ಕೆ. ಸತ್ಯಶಂಕರ್ ಶೆಟ್ಟಿ, ಲ. ಆನಂದ ಆಚಾರ್ಯ, ಲ. ಕೃಷ್ಣ ಶೆಟ್ಟಿ, ಲ. ಸತೀಶ್ ಪ್ರಭು, ಶಾಲೆಯ ಮುಖ್ಯ ಶಿಕ್ಷಕ ಗೌರವ್ ಆರ್. ಕೆ., ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀ ಶಾರದಾ ದೇವಿಯ ದಿವ್ಯ ಕೃಪಾಶೀರ್ವಾದವನ್ನು ಕೋರಿ, ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಶಾರದಾ ಪೂಜಾ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸಲಾಯಿತು.