ಬಾರಕೂರು ಏಕನಾಥೇಶ್ವರೀ ದೇವಸ್ಥಾನದಲ್ಲಿ ಅ.11ರಿಂದ ಶರನ್ನವರಾತ್ರಿ ಮಹೋತ್ಸವ

0
15

ಬಾರಕೂರು: ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ (ರಿ.) ವತಿಯಿಂದ ಶ್ರೀ ಏಕನಾಥೇಶ್ವರೀ ದೇವಿ ಸನ್ನಿಧಿಯಲ್ಲಿ ಅ.11ರಿಂದ 20ರವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ.

ಅ.11ರಂದು ಭಾನುವಾರದಿಂದ ವಿಜಯದಶಮಿಯ ದಿನವಾದ ಅ.20ರ ಮಂಗಳವಾರದವರೆಗೆ ನಡೆಯುವ ಉತ್ಸವದಲ್ಲಿ ವೇದಮೂರ್ತಿ ರಮೇಶ್ ಭಟ್ ನಾಯರ್‌ಬೆಟ್ಟು ಅವರ ಪೌರೋಹಿತ್ಯದಲ್ಲಿ ಪ್ರತಿದಿನ ಚಂಡಿಕಾಯಾಗ, ದುರ್ಗಾ ನಮಸ್ಕಾರ ಹಾಗೂ ರಂಗಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ಭಕ್ತರು ಕುಟುಂಬ ಹಾಗೂ ಇಷ್ಟಮಿತ್ರರೊಂದಿಗೆ ಶ್ರೀ ದೇವಿಯ ಸನ್ನಿಧಿಗೆ ಆಗಮಿಸಿ ಉತ್ಸವದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ಮುಡಿ, ಗಂಧ ಹಾಗೂ ಪ್ರಸಾದವನ್ನು ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ. ಉತ್ಸವದ ಅವಧಿಯಲ್ಲಿ ದೇವಸ್ಥಾನದಲ್ಲಿ ನಿತ್ಯ ಅನ್ನಸಂತರ್ಪಣೆ ನಡೆಯಲಿದೆ.

ವಿಜಯದಶಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮ

ವಿಜಯದಶಮಿ ಪ್ರಯುಕ್ತ ಅ.21ರಂದು ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಸರಸ್ವತಿ ಪೂಜೆ ಹಾಗೂ ಸಹಸ್ರ ಕುಂಕುಮಾರ್ಚನೆ ನಡೆಯಲಿದೆ. ಸಹಸ್ರ ಕುಂಕುಮಾರ್ಚನೆಗೆ ರೂ.250ರ ರಶೀದಿ ನಿಗದಿಪಡಿಸಲಾಗಿದೆ.

ಅ.12ರಂದು ಸೋಮವಾರ ಬೆಳಿಗ್ಗೆ 7.30ಕ್ಕೆ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಟ್ರಸ್ಟ್, ವ್ಯವಸ್ಥಾಪನಾ ಸಮಿತಿ, ಮಹಿಳಾ ಘಟಕ, ಪ್ರಧಾನ ಅರ್ಚಕರು, ಅರ್ಚಕ ವೃಂದ, ಸಿಬ್ಬಂದಿ ವರ್ಗ ಹಾಗೂ ದೇವಾಡಿಗ ಸಮಾಜದ ವಿವಿಧ ಸಂಘ-ಸಂಸ್ಥೆಗಳು ಮನವಿ ಮಾಡಿವೆ.