ಸಜೀಪ ಮುನ್ನೂರು: ಇಲ್ಲಿನ ಶ್ರೀ ಮಹಾಕಾಳಿ ದೇವಸ್ಥಾನ, ಮಹಾಕಾಳಿ ಪಡ್ಪು ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವವು ಅಕ್ಟೋಬರ್ 11ರ ಭಾನುವಾರದಿಂದ ಅಕ್ಟೋಬರ್ 20ರ ಮಂಗಳವಾರದವರೆಗೆ ಶ್ರದ್ಧಾಭಕ್ತಿಯಿಂದ ನಡೆಯಲಿದೆ.
ಮಹೋತ್ಸವದ ಅಂಗವಾಗಿ ಪ್ರತಿದಿನ ಶ್ರೀ ಲಲಿತಾ ಸಹಸ್ರನಾಮ ಅರ್ಚನೆ, ಶ್ರೀ ಸಪ್ತಶತಿ ಪಾರಾಯಣ, ಕಲ್ಪೋಕ್ತ ಪೂಜೆ, ಪ್ರಸನ್ನ ಪೂಜೆ, ಮಹಾಮಂಗಳಾರತಿ ಹಾಗೂ ರಂಗಪೂಜೆ ಸೇವೆಗಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಲಿವೆ.
ನವರಾತ್ರಿ ಸಂದರ್ಭದಲ್ಲಿ ಶ್ರೀ ಮಹಾಕಾಳಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆಗಳಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಲು ಭಕ್ತಾದಿಗಳಿಗೆ ಅವಕಾಶವಿದೆ. ಈ ಪುಣ್ಯ ಸಂದರ್ಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಕ್ಷೇತ್ರದ ವತಿಯಿಂದ ಆತ್ಮೀಯವಾಗಿ ಆಹ್ವಾನಿಸಲಾಗಿದೆ.
