ಶಿರ್ವ : ನೂತನ ಸ್ಕೂಟರ್‌ಗೆ ಬೆಂಕಿ : ಮನೆಯಂಗಳದಲ್ಲೇ ಹೊಂಡಾ ಡಿಯೋ ಸುಟ್ಟು ಕರಕಲು

0
7

ಶಿರ್ವ : ಪಂಜಿಮಾರು ಪಾಲಮೆಯ ನಿವಾಸಿ ದೀಪಶ್ರೀ ಅವರ ಹೊಸ ಸ್ಕೂಟರ್ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಮನೆಯಂಗಳದಲ್ಲಿ ನಿಲ್ಲಿಸಿದ್ದ Honda Dio ಏಕಾಏಕಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ.

ಮಾಹಿತಿಯ ಪ್ರಕಾರ, ದೀಪಶ್ರೀ ಅವರು ಜನವರಿ 18ರಂದು ಮಂಗಳೂರು ಮಳಿಗೆಯಿಂದ ಸುಮಾರು ₹1.18 ಲಕ್ಷ ಮೌಲ್ಯದ ಈ ಸ್ಕೂಟರ್ ಖರೀದಿಸಿದ್ದರು. ಒಂದು ವಾರ ಬಳಸಿದ ಬಳಿಕ ಅವರು ಮುಂಬೈಗೆ ತೆರಳಿದ್ದು, ನಂತರ ಸಹೋದರ ಪವನ್ ಸ್ಕೂಟರ್ ಚಲಾಯಿಸುತ್ತಿದ್ದರು.

ಸ್ಕೂಟರ್‌ನಲ್ಲಿ ಪದೇಪದೇ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದರಿಂದ ಫೆಬ್ರವರಿ 17ರಂದು ಬೆಳಿಗ್ಗೆ ಕಂಕನಾಡಿ ಬೈಪಾಸ್‌ನಲ್ಲಿರುವ ಅಧಿಕೃತ ಸೇವಾ ಕೇಂದ್ರಕ್ಕೆ ಕೊಂಡೊಯ್ದು ದುರಸ್ತಿ ಮಾಡಿಸಿಕೊಂಡಿದ್ದರು. ಮಧ್ಯಾಹ್ನ ಮನೆಗೆ ತಂದು ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಸ್ಕೂಟರ್‌ನಿಂದ ಅಸಾಮಾನ್ಯ ಶಬ್ದ ಕೇಳಿಬಂದಿದ್ದು, ಹೊರಗೆ ಬಂದಾಗ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ.

ತಕ್ಷಣ ಪವನ್ ಹಾಗೂ ಸ್ಥಳೀಯರು ನೀರು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಸ್ಕೂಟರ್ ಸಂಪೂರ್ಣವಾಗಿ ಸುಟ್ಟು ಹಾನಿಗೊಂಡಿದೆ.

ಈ ಘಟನೆ ವಾಹನ ಸುರಕ್ಷತೆ ಮತ್ತು ತಾಂತ್ರಿಕ ದೋಷಗಳ ಬಗ್ಗೆ ಆತಂಕ ಮೂಡಿಸಿದ್ದು, ಸಂಬಂಧಪಟ್ಟವರಿಂದ ಹೆಚ್ಚಿನ ಪರಿಶೀಲನೆ ಅಗತ್ಯವಿದೆ ಎಂಬ ಮಾತು ಕೇಳಿಬರುತ್ತಿದೆ.

LEAVE A REPLY

Please enter your comment!
Please enter your name here