ಕುವೆಂಪು ವಿವಿ ನಿವೃತ್ತ ಬೋಧಕೇತರ ನೌಕರರ ಸಂಘ ಉದ್ಘಾಟನೆ

0
5

ಮಂದಾರ ರಾಜೇಶ್ ಭಟ್

ಶಂಕರಘಟ್ಟ : ಮುಂದಿನ ದಿನಗಳಲ್ಲಿ ಕೇಂದ್ರ ವೇತನ ಆಯೋಗ ನೀಡುವ ವರದಿಯನ್ನೇ ಯಥಾವತ್ತಾಗಿ ನಮ್ಮ ರಾಜ್ಯದ ಸರ್ಕಾರಿ ನೌಕರರಿಗೂ ಅನ್ವಯವಾಗುವಂತೆ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ ಅದನ್ನು ಜಾರಿ ತರುವುದು ಶತ:ಸಿದ್ದ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿಯವರು ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದರು.

ಅವರು ಇಂದು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ.ಎಸ್.ಪಿ. ಹಿರೇಮಠ ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ವಿಶ್ವವಿದ್ಯಾನಿಲಯ ನಿವೃತ್ತ ಬೋಧಕೇತರ ನೌಕರರ ಸಂಘದ ಉದ್ಥಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಈಗಾಗಲೇ ಈ ನಿಟ್ಟಿನಲ್ಲಿ ನಮ್ಮ ಸಂಘ ರಾಜ್ಯ ಸರ್ಕಾರದ ಮೇಲೆ ಒತ್ತಡವನ್ನು ತಂದಿದೆ. ಈ ಬಗ್ಗೆ ಸರ್ಕಾರ ಇದಕ್ಕೆ ಪೂರಕವಾಗಿ ಸ್ಪಂದಿಸಿದೆ ಎಂದರು ವಿಶ್ವವಿದ್ಯಾನಿಲಯ ಒಂದು ಸ್ವಾಯುತ್ತ ಸಂಸ್ಥೆಯಾದರೂ ಕೂಡ ವಿವಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಕೂಡ ನಮ್ಮ ನೌಕರರುಗಳೆಂದೇ ರಾಜ್ಯ ಸರ್ಕಾರಿ ನೌಕರರ ಸಂಘ ಭಾವಿಸಿದೆ. ಸರ್ಕಾರದ ಯಾವುದೇ ಸೌಲಭ್ಯಗಳು ನಮ್ಮ ನೌಕರರಿಗೆ ದೊರಕಿದರೂ ಕೂಡ ಆ ಸೌಲಭ್ಯ ವಿವಿ ನೌಕರರಿಗೂ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

ಸಂಘಟನಾ ಚಾತುರ್ಯ ಹೊಂದಿರುವ ರಮೇಶ್ ಶಂಕರಘಟ್ಟರವರು ಈ ಸಂಘದ ನೇತೃತ್ವ ವಹಿಸಿರುವುದರಿಂದ ಈ ಸಂಘ ಯಶಸ್ವಿ ದಿಕ್ಕಿನಲ್ಲಿ ಸಾಗುತ್ತದೆ ಎಂಬ ಆಶಯವನ್ನು ಅಧ್ಯಕ್ಷರು ವ್ಯಕ್ತಪಡಿಸಿದರು.

ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶರತ್ ಆನಂತಮೂರ್ತಿಯವರು ಮಾತನಾಡಿ ಈ ವಿಶ್ವವಿದ್ಯಾನಿಲಯ ಪ್ರಾರಂಭವಾದಂದಿನಿಂದಲೂ ಕೆಲಸ ನಿರ್ವಹಿಸಿ ಈ ವಿವಿಯನ್ನು ಸದೃಢವಾಗಿ ಕಟ್ಟುವಲ್ಲಿ ನಿವೃತ್ತ ನೌಕರರ ಸೇವೆಯನ್ನು ವಿವಿ ಸದಾ ಸ್ಮರಿಸುತ್ತದೆ ಅಲ್ಲದೇ ಅಷ್ಟೇ ಗೌರವಾದರಗಳಿಂದ ವಿವಿ ಆಡಳಿತ ನಿಮ್ಮನ್ನು ನಡೆಸಿಕೊಳ್ಳುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಪರೀಕ್ಷಾಂಗದ ಕುಲಸಚಿವರಾದ ಪ್ರೊ.ಆರ್. ತಿಮ್ಮರಾಯಪ್ಪನವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಎಂ.ರಮೇಶ್ ಶಂಕರಘಟ್ಟ ಸ್ವಾಗತಿಸಿದರೆ, ಉಪಾಧ್ಯಕ್ಷರಾದ ಎಲ್.ಎಚ್. ಬಸವರಾಜ್ ವಂದಿಸಿದರು. ಸಂಘದ ಖಜಾಂಚಿ ಮಂಜುನಾಥ ಮನವಿ ಪತ್ರ ಓದಿದರು. ಕಾರ್ಯದರ್ಶಿ ಎಂ.ಸಿದ್ದರಾಮ ಕಾರ್ಯಕ್ರಮ ನಿರೂಪಿಸಿದರು.

ಯಡಿಯೂರಪ್ಪನವರು ಉಪಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ, ಎಂ.ಟಿ.ಎ. ಬ್ಲಾಕ್ ಹಾಗೂ ವಿವಿ ಆವರಣದಲ್ಲಿರುವ ರಂಭಾಪುರಿ ಕಾಲೇಜಿಗೆ ಅನುದಾನಗಳು ಸಿಗುವಲ್ಲಿ ಸಿ.ಎಸ್. ಷಡಾಕ್ಷರಿಯವರು ಪ್ರಮುಖ ಪಾತ್ರ ವಹಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಕೊಳ್ಳಬೇಕಾಗುತ್ತದೆ. ಇವರು ಸರ್ಕಾರದ ಅಧಿಕಾರಗಳ ಮಟ್ಟದಲ್ಲಿ ಇಟ್ಟುಕೊಂಡಿರುವ ಸಂಪರ್ಕವನ್ನು ನಮ್ಮ ವಿವಿ ಬಳಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಕುಲಪತಿಗಳಿಗೆ ತಿಳಿಸಬಯಸುತ್ತೇನೆ”.
ಎಂದು ಎಂ.ರಮೇಶ್ ಶಂಕರಘಟ್ಟ, ಅಧ್ಯಕ್ಷರು, ಕುವೆಂಪು ವಿವಿ ನಿವೃತ್ತ ಬೋಧಕೇತರ ನೌಕರರ ಸಂಘ ಇದೇ ಸಂದರ್ಭದಲ್ಲಿ ತಿಳಿಸಿದರು
.

LEAVE A REPLY

Please enter your comment!
Please enter your name here