ಶಿವಪುರ ಎಲಿಕೋಡು ಮಠ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ : ಶಿಲಾಮಯ ಗರ್ಭಗೃಹ ಸಮರ್ಪಣೆ – ಪುನ: ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ : ಕೃಷ್ಣಾಪುರ ಮಠಾದೀಶರು ಭಾಗಿ

0
9

ಶಿವಪುರ ( ಹೆಬ್ರಿ ) : ಹೆಬ್ರಿ ತಾಲ್ಲೂಕಿನ ಶಿವಪುರ ಎಲಿಕೋಡು ಮಠದಲ್ಲಿ ಶಿಲಾಮಯ ಗರ್ಭಗೃಹ ಸಮರ್ಪಣೆ, ಸಪರಿವಾರ ನಾಗಬ್ರಹ್ಮ ಪರಿವಾರ ದೇವರುಗಳು ಪ್ರತಿಷ್ಠಾಪನೆ ಮತ್ತು ಸಪರಿವಾರ ಶ್ರೀ ಗೋಪಾಲಕೃಷ್ಣ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವರ ಪುನ:ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಾನುವಾರ ನಡೆಯಿತು.

ಉಡುಪಿ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ದಿವ್ಯ ಉಪಸ್ಥಿತರಿದ್ದು ಪೂಜೆ ನೆರವೇರಿಸಿ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು. ಅರ್ಚಕ ವೇದಮೂರ್ತಿ ವಾಸುದೇವಾ ಭಟ್ ಶಿವಪುರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು.

ಸರ್ತಿ ವ್ಯವಸ್ಥಾಪಕರಾದ ಶ್ರೀನಿವಾಸ ಎಲಿಕೋಡು, ಬೈಕಾಡಿ ಮಂಜುನಾಥ ರಾವ್‌ ಎಲಿಕೋಡು ಶಿವಪುರ, ಭೋಜ ಶೆಟ್ಟಿ ಎಲಿಕೋಡು ಮತ್ತು ಎಲಿಕೋಡು ಪ್ರದೇಶದ ಪ್ರಮುಖರಿಗೆ ಕ್ಷೇತ್ರದ ಮಹಾಪ್ರಸಾದ ನೀಡಿ ಗೌರವಿಸಲಾಯಿತು. ಎಲಿಕೋಡು, ಶಿವಪುರ ಪರಿಸರದ ಪ್ರಮುಖರು, ಗಣ್ಯರ ಸಹಿತ ನೂರಾರು ಭಕ್ತ ಸಮೂಹ ಭಾಗಿಯಾದರು. ಎಲಿಕೋಡು ಮಠದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಎಲಿಕೋಡು ಮನೆತನದವರು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು.

ಎಲಿಕೋಡು ಮಠದ ಪ್ರಧಾನ ಅರ್ಚಕ ವಾಸುದೇವ ಆಚಾರ್ಯ, ಅರ್ಚಕ ವೃಂದದವರು, ಪ್ರಮುಖರಾದ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ಶಿವಪುರ ಎಲಿಕೋಡು, ಶ್ರೀನಾಥ್ ಎಲಿಕೋಡು, ಶಂಕರನಾರಾಯಣ ಕೊಡಂಚ, ಡಾ. ಗುರುಪ್ರಸಾದ ಕೊಡಂಚ, ರಾಧಮ್ಮ ಎಲಿಕೋಡು, ಎಲಿಕೋಡಿನ ವಿವಿಧ ಪ್ರಮುಖರಾದ ಚಂದು ನಾಯ್ಕ್‌, ರಮೇಶ ನಾಯ್ಕ್‌, ಪಾಂಡು ನಾಯ್ಕ್‌, ಹರೀಶ ನಾಯ್ಕ್, ಸಂತೋಷ ನಾಯ್ಕ್‌, ಪ್ರದೀಪ ನಾಯ್ಕ್‌ ಸಹಿತ ಎಲಿಕೋಡು ಮಠದ ಪ್ರಮುಖರು, ಎಲಿಕೋಡು ಮನೆತನದವರು, ವಿವಿಧ ಪ್ರಮುಖರು, ಗಣ್ಯರು, ಅರ್ಚಕ ವೃಂದದವರು, ಸ್ಥಳೀಯ ಪ್ರಮುಖರು, ವ್ಯವಸ್ಥಾಪನಾ ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಎಲಿಕೋಡು ಶಿವಪುರ ನಿತ್ಯಾನಂದ ಶೆಟ್ಟಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

ವರದಿ : ಸುಕುಮಾರ್‌ ಮುನಿಯಾಲ್‌

LEAVE A REPLY

Please enter your comment!
Please enter your name here