ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ಇದರ ಸಭೆಯು ನಮ್ಮಮನೆ ಹವ್ಯಕ ಭವನ ಗುರುವಾಯನಕೆರೆ ಇಲ್ಲಿ ನಡೆಯಿತು. ಭಜನಾ ಪರಿಷತ್ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ಸಾಲಿಯಾನ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ನಿರ್ದೇಶಕರಾದ ದಿನೇಶ್ ರವರು ಭಜನಾ ಪರಿಷತ್ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು ತಾಲೂಕು ಮಟ್ಟದಲ್ಲಿ ಎಲ್ಲಾ ಭಜನಾ ಮಂಡಳಿಯ ಸದಸ್ಯರು ಯೋಜನೆಯ ಒಕ್ಕೂಟದ ಸದಸ್ಯರುಗಳು ಎಲ್ಲರೂ ಸೇರಿ ಆಷಾಢ ತಿಂಗಳಿನಲ್ಲಿ ಕಾರ್ಯಕ್ರಮ ನಡೆಸುವ ಕುರಿತು ವಿವರಿಸಿದರು.
ವೆಂಕಟೇಶ್ ಭಟ್ ಕಜೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಹವ್ಯಕ ಭವನ ಇದರ ಅಧ್ಯಕ್ಷರಾದ ಎಂ ಪರಮೇಶ್ವರ ಭಟ್ ಎರಡಿಕಾನ, ಕಾರ್ಯದರ್ಶಿಗಳಾದ ವೆಂಕಪ್ಪಯ್ಯ ಕುಕ್ಕಜೆ,ಗುರುವಾಯನಕೆರೆ ವಲಯದ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ಜಗದೀಶ್ ಶೆಟ್ಟಿ ಮೈರಾ ಕರಾಯ, ಕಾರ್ಯದರ್ಶಿಯಾಗಿ ಸಂದೇಶ್ ಮದ್ದಡ್ಕ,ಉಪಾಧ್ಯಕ್ಷರಾಗಿ ಜಯರಾಜ್ ಬಂಗೇರ ಮುಂಡೂರು, ಜೊತೆ ಕಾರ್ಯದರ್ಶಿಗಳಾಗಿ ಸಂತೋಷ್ ಪೂಜಾರಿ, ಕೋಶಾಧಿಕಾರಿಯಾಗಿ ಸೋಮನಾಥ ಶಿರ್ಲಾಲು ಆಯ್ಕೆಯಾದರು.ತಾಲೂಕಿನ ಎಲ್ಲಾ ವಲಯ ಭಜನಾ ಪರಿಷತ್ತಿನ ಪದಾಧಿಕಾರಿಗಳು ಭಜನಾ ಮಂಡಳಿಯ ಸದಸ್ಯರು, ತಾಲೂಕು ಕೃಷಿ ಅಧಿಕಾರಿಯವರು ವಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.ಯೋಜನಾಧಿಕಾರಿಗಳಾದ ಅಶೋಕ್ ರವರು ಮಾಹಿತಿ ನೀಡಿ ಸರ್ವರನ್ನು ಆಧಾರದಿಂದ ಸ್ವಾಗತಿಸಿದರು. ಭಜನಾ ಪರಿಷತ್ ಜಿಲ್ಲಾ ಸಮನ್ವಯಾದಿಕಾರಿ ಸಂತೋಷ್ ಪಿ ಅಳಿಯೂರು ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ಯಶೋಧ ಕೃಷಿ ಮೇಲ್ವಿಚಾರಕ ಕೃಷ್ಣ ಹಾಜರಿದ್ದರು