ಶ್ರೀ ಮಾತಾ ಸಭಾಭವನ ಉದ್ಘಾಟನೆ, “ಮಹಾಮಾತೆ ಮಾರಿಯಮ್ಮ” ಬಿಡುಗಡೆ ಘಂಟಾನಾದ ಸೇವೆಗೆ ಚಾಲನೆ

0
4

ಕಾಪು,: ಇಲ್ಲಿಯ ಹೊಸಮಾರಿ ಗುಡಿ ದೇವಸ್ಥಾನದಲ್ಲಿ ಶ್ರೀಮಾತಾ ಸಭಾಭವನ ಉದ್ಘಾಟನೆ,”ಮಹಾಮಾತೆ ಮಾರಿಯಮ್ಮ” ಗ್ರಂಥ ಬಿಡುಗಡೆ ಹಾಗೂ ಘಂಟಾನಾದ ಸೇವೆಗೆ ಚಾಲನೆಯ ಪ್ರಯುಕ್ತ ಶ್ರೀ ಮಾತಾ ಸು – ವರ್ಣ ಪುಷ್ಪಾಂಜಲಿ‌ ಸೇವೆ ಪ್ರಾರಂಭ ಹಾಗೂ ಧಾರ್ಮಿಕ ಸಭಾಕಾರ್ಯಕ್ರಮವು ಮಂಗಳವಾರ ನೆರವೇರಿತು.
ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಕಾಪು‌ ಶ್ರೀ ಹೊಸಮಾರಿಗುಡಿ ದೇವಸ್ಥಾನ ನವನಿರ್ಮಾಣ ಸ್ಮರಣೆಯ ಸಂಪುಟ “ಮಹಾಮಾತೆ ಮಾರಿಯಮ್ಮ” ಗ್ರಂಥವನ್ನು ಕ್ಷೇತ್ರದ ಪ್ರಧಾನ ತಂತ್ರಿಯವರಾದ ವೇ‌.ಮೂ.ಕುಮಾರ ಗುರುತಂತ್ರಿ ಯವರು. ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಯೋಗೀಶ ಶೆಟ್ಟಿ,ಕಾಪು ದಿವಾಕರ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಅರ್. ಮೆಂಡನ್, ರಮೇಶ ಹೆಗ್ಡೆ ಮುಂತಾದ ಗಣ್ಯರು‌ ಬಿಡುಗಡೆಗೊಳಿಸಿದರು.ಸಂಪುಟದ ಪ್ರಧಾನ ಸಂಪಾದಕ ಕೆ.ಎಲ್.ಕುಂಡಂತಾಯ,ಸಂಪಾದಕರಾದ ಈಶ್ವರ ಚಿಟ್ಪಾಡಿ, ಸುಧಾಕರ ಶೆಟ್ಟಿ, ಯಶೋದಾ ಕೇಶವ,ಸುಜಾತಾ ಶೆಟ್ಟಿ ಪೆರಿಂಜೆ ಅವರು ಉಪಸ್ಥಿತರಿದ್ದರು.
ಒಂದು ದೇವಸ್ಥಾನದ ಮೂಲಕ ಆ ಪರಿಸರದ ಗತ ಇತಿಹಾಸವನ್ನು ಕಾಪಿಡಬಹುದು. ಇತಿಹಾಸ ಉಳಿದಾಗ ಕ್ಷೇತ್ರದ ಹಿನ್ನೆಲೆ ಶತಮಾನಗಳ ಬಳಿಕವೂ ನಿಚ್ಚಳವಾಗಿರುತ್ತದೆ ಈ ಕಾರಣಕ್ಕೆ “ಮಹಾಮಾತೆ ಮಾರಿಯಮ್ಮ”ದಂತಹ ಗ್ರಂಥಗಳ ಅಗತ್ಯವಿದೆ, ಗ್ರಂಥದಲ್ಲಿ ಪೌರಾಣಿಕ, ಐತಿಹಾಸಿಕ,ಜಾನಪದ ಹಿನ್ನೆಲೆಗಳ ವಿಸ್ತಾರವಾದ ಹೇಳಿಕೆಗಳ ನಿರೂಪಣೆಗಳಿವೆ ಎಂದು ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ ಹೇಳಿದರು.‌ಸಂಪುಟದ ಪ್ರಧಾನ ಸಂಪಾದಕರ ಸಹಿತ ಸಂಪಾದಕರನ್ನು ಗೌರವಿಸಲಾಯಿತು.
ಘಂಟಾನಾದ ಸೇವೆಯ ಕುರಿತು ಕುಮಾರ ಗುರು ತಂತ್ರಿಯವರು ಪುರಾಣದ ಉಲ್ಲೇಖ ಸಹಿತ ವಿವರಿಸಿದರು, ಪುಷ್ಪಾಂಜಲಿ ಸೇವೆಯ ಮಹತ್ವವನ್ನು ತಿಳಿಸಿದರು.
ನಡಿಕೆರೆ ರತ್ನಾಕರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ವಾಸುದೇವ ಶೆಟ್ಟಿ ಅವರು ಪ್ರಸ್ತಾವಿಸಿ ಸ್ವಾಗತಿಸಿದರು.,ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಮತ್ತು ಬಹುಮಾನ್ಯರು, ದಾನಿಗಳು ಭಾಗವಹಿಸಿದ್ದರು.ಬ್ರಹ್ಮಕಲಶಾಭಿಷೇಕ ಸಂದರ್ಭ ನಿರಂತರ ವಿವಿಧ ವಿಭಾಗಗಳಲ್ಲಿ ಸೇವೆಸಲ್ಲಿಸಿದವರನ್ನು ಗೌರವಿಸಲಾಯಿತು. ವಿದ್ವಾಂಸ ದಾಮೋದರ ಶರ್ಮ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
 

LEAVE A REPLY

Please enter your comment!
Please enter your name here