ಉಡುಪಿ ; ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಶ್ರೀ ದೇವರ ಸನ್ನಿಧಿಯಲ್ಲಿ ಅಧಿಕ ಜ್ಯೇಷ್ಠ ಮಾಸದ ಮಂಗಲಾಚರಣೆ ಪ್ರಯುಕ್ತ ಸೋಮವಾರ ಮೂಲ ಮಂತ್ರ ಹವನ ನಡೆಯಿತು. ದೇವಳದ ಅರ್ಚಕರಾದ ರವೀಂದ್ರ ಭಟ್ , ವಿನಾಯಕ ಭಟ್ , ದಯಾಘನ್ ಭಟ್ , ವಿದ್ವಾನ್ ಹರಿಪ್ರಸಾದ್ ಶರ್ಮ , ರಮೇಶ ಭಟ್ , ದೀಪಕ್ ಭಟ್ , ಲಕ್ಷೀನಾರಾಯಣ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆಡೆಸಿಕೊಟ್ಟರು , ದೇವಳದ ಆಡಳಿತ ಮಂಡಳಿಯ ಸದಸ್ಯರಾದ ಮಹೇಶ ಶೆಣೈ ದಂಪತಿಗಳು ಪೂಜಾ ಕಾರ್ಯದಲ್ಲಿ ಸಹಕರಿಸಿದರು. ಶ್ರೀದೇವರಿಗೆ ಪಂಚಾಮೃತ ಅಭಿಷೇಕ , ಕನಕಾಭಿಷೇಕ, ಪವಮಾನ ಅಭಿಷೇಕ , ವಿಶೇಷ ಅಲಂಕಾರ , ಯಾಗದ ಪೂರ್ಣಾಹುತಿ ಬಳಿಕ ಮಹಾಪೂಜೆ , ಭಕ್ತಾಧಿಗಳಿಂದ ಸಾಮೂಹಿಕ ನಮಸ್ಕಾರ , ಪ್ರಸಾದ ವಿತರಣೆ ಹಾಗೂ ಸಮಾರಾಧನೆ ನಡೆಯಿತು . ದೇವಳದ ಆಡಳಿತ ಮೊಕ್ತೇಸರರಾದ ಗುಜ್ಜಾಡಿ ಪ್ರಭಾಕರ ನಾಯಕ್ , ಆಡಳಿತ ಮಂಡಳಿಯ ಸದಸ್ಯರು , ಅರ್ಚಕವೃಂದ , ಸ್ವಯಂ ಸೇವಕರು , ಸೇವಾದಾರರು , ಜಿ ಎಸ್ ಬಿ ಯುವಕ / ಮಹಿಳಾ ಮಂಡಳಿಯ ಸದಸ್ಯರು , ನೂರಾರು ಸಮಾಜ ಬಾಂದವರು ಉಪಸ್ಥರಿದ್ದರು.

