ಸಿದ್ಧಕಟ್ಟೆ: 8ನೇ ವರ್ಷದ ‘ಸಿದ್ಧಕಟ್ಟೆ ದಸರಾ’ ಸಮಾಪನ

0
5

ಬಂಟ್ವಾಳ: ಕೈಯಲ್ಲಿ ಯಾವುದೇ ಆಯುಧವಿಲ್ಲದೆ ಪುಸ್ತಕ ಸಹಿತ ಜ್ಞಾನದ ಸಂಕೇತವಾಗಿ ಕಂಗೊಳಿಸುವ ಶಾರದೆಯು ಜಪಮಾಲೆ ಮತ್ತು ವೀಣೆಯ ಜೊತೆಗೆ ಕಮಂಡಲಧಾರಿಣಿಯಾಗಿ ಜಗತ್ತಿಗೆ ಶಾಂತಿಯ ಸಂದೇಶದ ಅಗತ್ಯತೆ ಸಾರುತ್ತಿದ್ದಾಳೆ. ಜ್ಞಾನದಿಂದ ಅಣುಬಾಂಬು ಸಹಿತ ನಿಷ್ಕಿçಯಗೊಳಿಸಲು ಸಾಧ್ಯವಿದೆ ಎಂಬ ಸತ್ಯದ ಅರಿವು ಎಲ್ಲರಲ್ಲೂ ಇರಬೇಕು ಎಂದು ಚಿಂತಕ ಅರವಿಂದ ಚೊಕ್ಕಾಡಿ ಹೇಳಿದ್ದಾರೆ.

ಇಲ್ಲಿನ ಸಿದ್ಧಕಟ್ಟೆ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಭಾನುವಾರ ಸಮಾಪನಗೊಂಡ 8ನೇ ವರ್ಷದ ‘ಸಿದ್ಧಕಟ್ಟೆ ದಸರಾ’ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಿತಿ ಗೌರವಾಧ್ಯಕ್ಷ , ಮಾಜಿ ಸಚಿವ ಬಿ.ರಮಾನಾಥ ರೈ, ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ ಇಂಜಾಡಿ ಶುಭ ಹಾರೈಸಿದರು.

ಉದ್ಯಮಿ ವಿಜಯೇಂದ್ರ ಸೇಠ್, ಮೂಡ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಬಿಲ್ಲವ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ಸೈನಿಕ ಶ್ರೀಧರ ಅಂಚನ್ ಪಂಜಿಕಲ್ಲು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬೂಬ ಮಡಿವಾಳ, ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ನೋಣಯ ಶೆಟ್ಟಿಗಾರ್, ನಿವೃತ್ತ ಮುಖ್ಯಶಿಕ್ಷಕ ನಾರಾಯಣ ನಾಯಕ್ ಕರ್ಪೆ, ಎಎಸೈ ಹರೀಶ ನಾಯ್ಕ್, ಜಿಲ್ಲಾ ರಾಜ್ಯೋತ್ಸಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರವೀಂದ್ರ ನಾಯಕ್, ಕಂಬಳ ಕ್ಷೇತ್ರದ ಸಾಧಕ ಸಂಜೀವ ರೈ ಬೆಳ್ಳಿಪಾಡಿ, ಶಿಕ್ಷಕ ಮಹೇಶ ಕರ್ಕೇರ ಮತ್ತಿತರರು ಇದ್ದರು.

ಇದೇ ವೇಳೆ ಸ್ಮಶಾನ ನಿರ್ವಾಹಕರಾದ ರವಿ ಪೂಜಾರಿ ಪರನೀರು, ದಿನೇಶ ಪೂಜಾರಿ ಸಂಗಬೆಟ್ಟು, ಬಿ.ದಯಾನಂದ ಸಪಲ್ಯ ರಾಯಿ, ಅಂಚೆ ಪಾಲಕರಾದ ಶ್ರೀಧರ ಪೂಜಾರಿ, ವಿಶ್ವನಾಥ ನಾಯಕ್, ಭೋಜ ಶೆಟ್ಟಿಗಾರ್ ಸಹಿತ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮತ್ತು ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸಮಿತಿ ಸಂಚಾಲಕ ಜಗದೀಶ ಕೊಯಿಲ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ ರೈ ವಂದಿಸಿದರು. ಪ್ರಜ್ವಲ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.