ಜ. 24 ರಂದು ಸೇಂಟ್ ಪಾಲ್ಸ್ ಕಾನ್ವೆಂಟ್ ಶಾಲೆಯ 1999-2000 ಬ್ಯಾಚ್ ವಿದ್ಯಾರ್ಥಿಗಳ ಬೆಳ್ಳಿ ಹಬ್ಬದ ಸಂಭ್ರಮ

0
35

ದಾವಣಗೆರೆ : ದಾವಣಗೆರೆಯ ಪಿ.ಜೆ. ಬಡಾವಣೆಯ 1999-2000 ಸೇಂಟ್ ಪಾಲ್ಸ್ ಕಾನ್ವೆಂಟ್ ಮತ್ತು ಪ್ರೌಢ ಶಾಲೆಯಲ್ಲಿ 1999-2000 ಇಸವಿಯಲ್ಲಿ ಎಸ್.ಎಸ್.ಎಲ್.ಸಿ. ಮುಗಿಸಿದ ವಿದ್ಯಾರ್ಥಿನಿಯರು ಅವರಿಗೆ ಅಕ್ಷರಾಭ್ಯಾಸ ನೀಡಿ ಮಾರ್ಗದರ್ಶನ ನೀಡಿದ ಹಿರಿಯ ಶಿಕ್ಷಕ, ಶಿಕ್ಷಕಿಯರಿಗೆ “ಗುರು ವಂದನೆ” ಕಾರ್ಯಕ್ರಮ ಏರ್ಪಡಿಸಿ ಗುರುಗಳಿಗೆ ಕೃತಜ್ಞತೆ ಸಲ್ಲಿಸಿ ಗೌರವಿಸುತ್ತಾರೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಇದೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.

ದಿನಾಂಕ 24-01-2026ನೇ ಶನಿವಾರ ಮಧ್ಯಾಹ್ನ 12.30ಕ್ಕೆ ದಾವಣಗೆರೆಯ ಪಿ.ಜೆ. ಬಡಾವಣೆಯಸೇಂಟ್ ಪಾಲ್ಸ್ ಕಾನ್ವೆಂಟ್ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ. 1999-2000 ಇಸವಿಯಲ್ಲಿ ಎಸ್.ಎಸ್.ಎಲ್‌.ಸಿ. ಮುಗಿಸಿದ ವಿದ್ಯಾರ್ಥಿನಿಯರು ಇದ್ದರೆ ಶಾಲೆಯಲ್ಲಿ ಒಂದು ಸಾರಿ ಸಂಪರ್ಕಿಸಿ ಎಂದು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here