ಶ್ರೀ ಗಾಯತ್ರಿ ಮಂತ್ರ ಮಾನವ ಜೀವನಕ್ಕೆ ಆಧ್ಯಾತ್ಮ ಪರಂಪರೆಯ ನೆಲಗಟ್ಟು – ಡಾ. ಪವನ್ ಭಟ್

0
53

ದಾವಣಗೆರೆ : ಬ್ರಹ್ಮ, ವಿಷ್ಣು, ಮಹೇಶ್ವರರ ತ್ರಿಮೂರ್ತಿಗಳ ಧ್ಯಾನಕ್ಕೆ ಶ್ರೀ ಗಾಯತ್ರಿ ಮಂತ್ರ ಮಾನವ ಜೀವನಕ್ಕೆ ಆಧ್ಯಾತ್ಮ ಪರಂಪರೆಯ ನೆಲಗಟ್ಟು ಶ್ರೀ ಗಾಯತ್ರಿ ಪರಿವಾರ ಯಾವುದೇ ಜಾತಿ, ಮತ, ಲಿಂಗ ಭೇದವಿಲ್ಲದೆ ಕಳೆದ 25 ವರ್ಷಗಳಿಂದ ನಿರಂತರವಾಗಿ ಶ್ರೀ ಗಾಯತ್ರಿ ಧ್ಯಾನ ಪೂಜೆ, ಉಪಾಸನೆ ನಡೆಯುತ್ತಿರುವುದು ಶ್ಲಾಘನೀಯ ಎಂದು ಅಖಿಲ ಕರ್ನಾಟಕ ಅರ್ಚಕರ ಪುರೋಹಿತ ಪರಿಷತ್ತಿನ ದಾವಣಗೆರೆ ಜಿಲ್ಲಾಧ್ಯ್ಯಕ್ಷರಾದ ಡಾ. ಪವನ್ ಭಟ್ ತಮ್ಮ ಅಂತರಾಳದ ಮಾತು ವ್ಯಕ್ತಪಡಿಸಿದರು.

ದಾವಣಗೆರೆಯ ಜಯದೇವ ವೃತ್ತದ ಹತ್ತಿರವಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ಶ್ರೀ ಗಾಯತ್ರಿ ಪರಿವಾರದ ಬೆಳ್ಳಿ ಹಬ್ಬ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಯನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿ ಡಾ. ಪವನ್ ಭಟ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪರಿವಾರದ ಅಧ್ಯಕ್ಷರಾದ ಡಾ|| ರಮೇಶ್ ಪಟೇಲ್ ಮಾತನಾಡಿ ನಮ್ಮ ನಿಮ್ಮೆಲ್ಲರ ಸಂಸ್ಕಾರ, ಸಂಸ್ಕೃತಿ, ಶ್ರೀ ಗಾಯತ್ರಿ ಮಂತ್ರದ ಪಠಣಗಳು ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಪರಿವಾರದ ಗೌರವ ಅಧ್ಯಕ್ಷರಾದ ಡಾ|| ಸುಶೀಲಮ್ಮ, ಪರಿವಾರದ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್ ಮಾತನಾಡಿ, ದೇವರ ಆರಾಧನೆಗೆ ಶ್ರೀ ಗಾಯತ್ರಿ ಮಂತ್ರವೇ ಮೂಲ ಇದರಿಂದಾಗಿ ನಮ್ಮೆಲ್ಲರ ಜೀವನದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಶ್ರೀ ಗಾಯತ್ರಿ ಧ್ಯಾನದಿಂದ ನಮ್ಮ ಅನಾರೋಗ್ಯ ಹೊರತುಪಡಿಸಿ ಆರೋಗ್ಯ ಭಾಗ್ಯ ಲಭ್ಯವಾಗುತ್ತದೆ ಎಂದರು.

ಶ್ರೀ ಗಾಯತ್ರಿ ಪರಿವಾರದ ಬೆಳ್ಳಿ ಹಬ್ಬದ ಉದ್ಘಾಟನೆಯ ಮೊದಲು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಧ್ಯಾನದೊಂದಿಗೆ ಅತ್ಯದ್ಭುತವಾಗಿ ವಿಜೃಂಭಣೆಯಿಂದ ನಡೆಯಿತು.

ಮುಕ್ತಾ ಶ್ರೀನಿವಾಸಪ್ರಭುರವರ ಶ್ರೀ ಗಣೇಶನ ಧ್ಯಾನದೊಂದಿಗೆ ಪ್ರಾರ್ಥನೆ ಮಾಡಿದರು, ಚಂದ್ರಶೇಖರ ಅಡಿಗ ಅಚ್ಚುಕಟ್ಟಾಗಿ ನಿರೂಪಿಸಿದರು. ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಗಾಯತ್ರಿ ಪರಿವಾರ 25 ವರ್ಷಗಳ ನಡೆದು ಬಂದ ದಾರಿ ವಿವರಿಸಿದರು.

ಪರಿವಾರದ ಕೋಶಾಧ್ಯಕ್ಷರಾದ ಪುರುಷೋತ್ತಮ ಡಿ.ಪಟೇಲ್, ಸಂಚಾಲಕರಾದ ಸಿ.ಹೆಚ್.ಭಾವನ್ನಾರಾಯಣ, ಜ್ಯೋತಿ ಸಾಲಿಗ್ರಾಮ ಗಣೇಶ್ ಶೆಣೈ ಮುಂತಾದವರು ಉಪಸ್ಥಿತರಿದ್ದರು ಎಂ.ಎಸ್.ಪ್ರಸಾದ್ ಸ್ವಾಗತಿಸಿದರು. ಕೊನೆಯಲ್ಲಿ ಹೇಮಾ ಶಾಂತಪ್ಪ ಪೂಜಾರಿ ವಂದಿಸಿದರು.

LEAVE A REPLY

Please enter your comment!
Please enter your name here