ಕಡಂದಲೆಯಲ್ಲಿ ಅದ್ಧೂರಿಯಾಗಿ ನಡೆದ ಸ್ಕಂದ ಫ್ರೆಂಡ್ಸ್ ಕ್ರಿಕೆಟ್ ಪಂದ್ಯಾಟ

0
84

ಕಡಂದಲೆ : ಮೂಡಬಿದಿರೆ ತಾಲೂಕಿನ ಅತಿ ದೊಡ್ಡ ಕ್ರೀಡಾಂಗಣಗಳಲ್ಲಿ ಒಂದಾದ ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಸ್ಕಂದ ಫ್ರೆಂಡ್ಸ್ ಗೊಳಿದಡಿ–ಕಡಂದಲೆ ಇವರ ನೇತೃತ್ವದಲ್ಲಿ ಅಕ್ಟೋಬರ್ 4ರಂದು ಆಹ್ವಾನಿತ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಅದ್ಧೂರಿಯಾಗಿ ನಡೆಯಿತು.

ಕ್ರೀಡಾಭಿಮಾನಿಗಳ ಹಾಗೂ ಸ್ಥಳೀಯರ ಉತ್ತಮ ಸಹಕಾರದೊಂದಿಗೆ ನಡೆದ ಪಂದ್ಯಾಟವು ಅತ್ಯಂತ ಯಶಸ್ವಿಯಾಗಿ, ಉತ್ಸಾಹಭರಿತವಾಗಿ ನಡೆಯಿತು. ವಿವಿಧ ತಂಡಗಳು ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದವು. ಪಂದ್ಯಾಟದ ಸಂದರ್ಭದಲ್ಲಿ ಆಟಗಾರರಿಗೆ ಹಾಗೂ ಕ್ರೀಡಾಭಿಮಾನಿಗಳಿಗೆ ಉತ್ತಮ ಕ್ರೀಡಾ ವಾತಾವರಣ ನಿರ್ಮಾಣವಾಗಿತ್ತು.

ಪಂದ್ಯಾಟದಲ್ಲಿ ಸ್ಕಂದ ಪ್ರಥಮ ಟ್ರೋಫಿಯನ್ನು ಕಾರ್ತಿಕ್ ಕ್ರಿಕೆಟರ್ಸ್ ಕಡಂದಲೆ ತಂಡ ಪಡೆದುಕೊಂಡಿತು. ಪಲ್ಕೆ ಫ್ರೆಂಡ್ಸ್ ಕಡಂದಲೆ ತಂಡ ದ್ವಿತೀಯ ಸ್ಥಾನ, ಮಹಾಮಾಯಿ ಫ್ರೆಂಡ್ಸ್ ವರ್ಣಬೆಟ್ಟು ತಂಡ ತೃತೀಯ ಸ್ಥಾನ ಹಾಗೂ ಎಸ್‌ಎಸ್‌ಎಫ್‌ಸಿ ಕಡಂದಲೆ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.

ನಂತರ ನಡೆದ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಸಂದೀಪ್ ಶೆಟ್ಟಿ, ಸುಕೇಶ್ ಶೆಟ್ಟಿ ಕೇಮಾರು, ಸುಕೇಶ್ ಶೆಟ್ಟಿ ಕಡಂದಲೆ ಸೇರಿದಂತೆ ಸ್ಕಂದ ಫ್ರೆಂಡ್ಸ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಪ್ರಶಸ್ತಿ ಹಾಗೂ ಅಭಿನಂದನೆ ಸಲ್ಲಿಸಿದರು.

ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಸುರೇಂದ್ರ ಭಟ್ ನಿರ್ವಹಿಸಿದರು. ದೀಕ್ಷಿತ್ ಶೆಟ್ಟಿ ವಂದಿಸಿದರು. ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ ಎಲ್ಲಾ ತಂಡಗಳು, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು, ಪ್ರಾಯೋಜಕರು ಹಾಗೂ ಊರಿನವರಿಗೆ ಸ್ಕಂದ ಫ್ರೆಂಡ್ಸ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು. ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳು ನಿರಂತರವಾಗಿ ನಡೆಯಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.