ಮಂಗಳೂರು : ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ-1987ರ ಅಡಿಯಲ್ಲಿ ಕಾರ್ಯನಿರ್ವಹಿಸುವ ಖಾಯಂ ಜನತಾ ನ್ಯಾಯಾಲಯ ಹಾಗೂ ‘ ರಾಷ್ಟ್ರೀಯ ಲೋಕ ಅದಾಲತ್’ಗಳ ಮಹತ್ವದ ಕುರಿತು ಪ್ಯಾರಾ ಲೀಗಲ್ ಸ್ವಯಂಸೇವಕರಿಗೆ (PLV) ಜೂನ್ 23 ರಂದು ವಿಶೇಷ ಮಾಹಿತಿ ಮತ್ತು ಅರಿವು ಮೂಡಿಸುವ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಾರ್ವಜನಿಕರ ವಿವಾದಗಳನ್ನು ಸೌಹಾರ್ದಯುತವಾಗಿ ಹಾಗೂ ಉಚಿತವಾಗಿ ಬಗೆಹರಿಸುವಲ್ಲಿ ಲೋಕ ಅದಾಲತ್‌ನ ಪಾತ್ರದ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.
ಇದರೊಂದಿಗೆ, NALSA ಮತ್ತು KSLSA ಮಾರ್ಗಸೂಚಿಗಳ ಅನ್ವಯ ಅಂತರರಾಷ್ಟ್ರೀಯ ಪರಿಸರ ದಿನಾಚರಣೆಯ ಅಂಗವಾಗಿ ಜೂನ್ 5 ರಿಂದ ಆಗಸ್ಟ್ 5, 2026 ರವರೆಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ “ಬೃಹತ್ ಗಿಡ ನೆಡುವಿಕೆ ಮತ್ತು ಪರಿಸರ ಜಾಗೃತಿ ಅಭಿಯಾನ”ವನ್ನು ಯಶಸ್ವಿಗೊಳಿಸಲು ಸ್ವಯಂಸೇವಕರು ಕೈಜೋಡಿಸಬೇಕೆಂದು ಖಾಯಂ ಜನತಾ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರುಗಳು ಕರೆ ನೀಡಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿಗಳಾದ ಜೈ ಬನ್ನಿಸ ಅವರು ಉಪಸ್ಥಿತರಿದ್ದು, ಸಾರ್ವಜನಿಕರಿಗೆ ಕಾನೂನು ನೆರವು ತಲುಪಿಸುವಲ್ಲಿ PLVಗಳ ಜವಾಬ್ದಾರಿಗಳ ಕುರಿತು ಪ್ರಮುಖ ಮಾರ್ಗದರ್ಶನ ನೀಡಿದರು.
ವರದಿ-ಮಂದಾರ ರಾಜೇಶ್ ಭಟ್

