ಬಂಟ್ವಾಳ ತಾಲ್ಲೂಕಿನ ಕ್ರೀಡಾಪಟು ಜಯಲಕ್ಷ್ಮಿ ಗಾಣಿಗ ಕಡೇಶ್ವಾಲ್ಯ ಇವರು ಈಚೆಗೆ ನಡೆದ ದಕ್ಷಿಣ ಏಷ್ಯಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಭಾರತೀಯ ಮಹಿಳಾ ತಂಡದ ನಾಯಕಿಯಾಗಿ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕ ಗಳಿಸಿದ ಇವರನ್ನು ಮಾಜಿ ಸಚಿವ ಬಿ.ರಮಾನಾಥ ರೈ ಮತ್ತು ಶೈಲಜಾ ಆರ್.ರೈ ದಂಪತಿ ಸನ್ಮಾನಿಸಿ ಗೌರವಿಸಿದರು.
ಸಹೋದರ ಅಶೋಕ್ ಗಾಣಿಗ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು, ದೇಹದಾಢ್ರ್ಯ ಪಟು ಗಣೇಶ್ ಪೂಜಾರಿ, ಎಂಪಿಎಂಸಿ ಮಾಜಿ ಸದಸ್ಯ ಚಂದ್ರಶೇಖರ ರೈ ಮತ್ತಿತರರು ಇದ್ದರು.

