ರೇಡಿಯೊ ಮಣಿಪಾಲದಲ್ಲಿ ಅಂತರಾಷ್ಟ್ರೀಯ ಸೋಂಕು‌ ತಡೆಗಟ್ಟುವಿಕೆ ಸಪ್ತಾಹ ವಿಶೇಷ ಕಾರ್ಯಕ್ರಮ

0
14

ಮಣಿಪಾಲ್ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿ ಇರುವ ರೇಡಿಯೊ ಮಣಿಪಾಲ್ 90.4 MHz ಸಮುದಾಯ ಬಾನುಲಿ ಕೇಂದ್ರದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ‌ ಮತ್ತು ಎಂ.ಐ.ಸಿ ಮಣಿಪಾಲ ಇವರ ಸಹಯೋಗದೊಂದಿಗೆ ಪ್ರಸಾರವಾಗುವ ಆರೋಗ್ಯ ದರ್ಶನ ಸರಣಿ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಸೋಂಕು‌ ತಡೆಗಟ್ಟುವಿಕೆ ಸಪ್ತಾಹ ಅಂಗವಾಗಿ ಮಣಿಪಾಲ ಕೆ.ಎಂಸಿಯ ಸೋಂಕು ನಿಯಂತ್ರಣ ಸುಶ್ರೂಷಕರಾದ ಶ್ರೀದೇವಿ ಶೆಟ್ಟಿ ಪರ್ಕಳ ಅವರು ಭಾಗವಹಿಸಿ ವಿಶೇಷ ಮಾಹಿತಿ ನೀಡಲಿದ್ದಾರೆ.

ಇದು ಅಕ್ಟೊಬರ್ 22 ರಂದು ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ ಮತ್ತು ಅಕ್ಟೊಬರ್ 23 ರಂದು ಮಧ್ಯಾಹ್ನ 2 ಗಂಟೆಗೆ ಮರು ಪ್ರಸಾರವಾಗಲಿದೆ. ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು
ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.